ಟೋಕಿಯೊ: ಕಾಂಡೋಮ್ ಬಳಸಿ ಕೆನೊಯಿಂಗ್ (ಹುಟ್ಟಿನಂಥ ಸಾಧನ ಬಳಸಿ ನಡೆಯುವ ಬೋಟ್‌ಗಳ ರೇಸ್) ದುರಸ್ತಿ ಮಾಡಿರುವ ಸ್ಪರ್ಧಿಯೊಬ್ಬರು ಚಿನ್ನ ಸೇರಿದಂತೆ ಎರಡು ಪದಕ ಗೆದ್ದಿರುವ ಕುತೂಹಲಕಾರಿ ವಾರ್ತೆಯು ಟೋಕಿಯೊ ಒಲಿಂಪಿಕ್ಸ್‌ನಿಂದ ವರದಿಯಾಗಿದೆ.

ಆಸ್ಟ್ರೇಲಿಯಾದ ಕೆನೊಯಿಂಗ್ ಸ್ಪರ್ಧಿ ಜೆಸ್ಸಿಕಾ ಫಾಕ್ಸ್, ಕೆನೊಯಿಂಗ್ ರಿಪೇರಿಗಾಗಿ ಕಾಂಡೋಮ್ ಬಳಕೆ ಮಾಡಿದ್ದಾರೆ.

ಇದನ್ನೂ ಓದಿ:Tokyo Olympics: ಈಕ್ವೆಸ್ಟ್ರಿಯನ್: ಗಮನ ಸೆಳೆದ ಮಿರ್ಜಾ

ಜೆಸ್ಸಿಕಾ ಫಾಕ್ಸ್ ಮಹಿಳೆಯರ 'ಕೆನೊಯಿಂಗ್ ಸ್ಲಾಲೊಮ್' ಮತ್ತು 'ಕಾಯಾಕ್ ಸ್ಲಾಲೊಮ್' ವಿಭಾಗದಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಈ ವಿವರವನ್ನು ಸ್ವತಃ ಜೆಸ್ಸಿಕಾ ಅವರೇ ಬಹಿರಂಗಪಡಿಸಿದ್ದಾರೆ. ಕೆನೊಯಿಂಗ್ ಮುಂಭಾಗದಲ್ಲಿ ಕಾಣಿಸಿಕೊಂಡ ದೋಷವನ್ನು ಸರಿಪಡಿಸಲು ಕಾರ್ಬನ್ ಮಿಶ್ರಣವನ್ನು ಮೆತ್ತಿದ ಬಳಿಕ ಕಾಂಡೋಮ್ ಅಂಟಿಸಿರುವುದಾಗಿ ಹೇಳಿದ್ದಾರೆ.

ಕೆನೊಯಿಂಗ್ ಹಾಗೂ ಕಾಯಾಕ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆಯಾಗಿರುವ 27 ವರ್ಷದ ಜೆಸ್ಸಿಕಾ ಫಾಕ್ಸ್, ಒಲಿಂಪಿಕ್ಸ್ ಇತಿಹಾಸದಲ್ಲಿ ಸ್ಲಾಲೋಮ್ ರೇಸ್ ಗೆದ್ದ ಮೊದಲ ಮಹಿಳಾ ಸ್ಪರ್ಧಿ ಎನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.