ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುದ್ದು ಹಾಜರಾಗುವಿಕೆ: ಬಜರಂಗ್ ಪೂನಿಯಾಗೆ ವಿನಾಯಿತಿ

Published 14 ಸೆಪ್ಟೆಂಬರ್ 2023, 23:25 IST
Last Updated 14 ಸೆಪ್ಟೆಂಬರ್ 2023, 23:25 IST
ಅಕ್ಷರ ಗಾತ್ರ

ನವದೆಹಲಿ: ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಖುದ್ದು ಹಾಜರಾಗುವಿಕೆಯಿಂದ ದೆಹಲಿ ನ್ಯಾಯಾಲಯವೊಂದು ಗುರುವಾರ ವಿನಾಯಿತಿ ನೀಡಿ ಆದೇಶಿಸಿದೆ. ಬಜರಂಗ್ ವಿರುದ್ಧ ಕುಸ್ತಿ ಕೋಚ್‌ ನರೇಶ್ ದಹಿಯಾ ಅವರು ಮಾನಹಾನಿ ಪ್ರಕರಣ ಹೂಡಿದ್ದರು.

ಬಜರಂಗ್ ಅವರು ಈ ತಿಂಗಳ 23ರಂದು ಆರಂಭವಾಗುವ ಏಷ್ಯನ್‌ ಗೇಮ್ಸ್‌ಗೆ ಸಜ್ಜಾಗಲು ಕಿರ್ಗಿಸ್ಥಾನದಲ್ಲಿ ಅಭ್ಯಾಸ ನಡೆಸುತ್ತಿರುವುದಾಗಿ ಅವರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಯಶದೀಪ್ ಚಾಹಲ್ ಅವರು ವಿನಾಯಿತಿ ನೀಡಿದರು.

ಬಜರಂಗ್ ಅವರಿಗೆ ಜ್ವರ ಇರುವುದಾಗಿ ಅವರ ವಕೀಲರು ತಿಳಿಸಿದ್ದರಿಂದ ಈ ಹಿಂದೆ, ಸೆ. 6ರಂದು ನ್ಯಾಯಾಧೀಶರು ವೈದ್ಯಕೀಯ ನೆಲೆಯಲ್ಲಿ ವೈಯಕ್ತಿಕವಾಗಿ ಹಾಜರಾಗುವುದರಿಂದ ದಿನದ ಮಟ್ಟಿಗೆ  ವಿನಾಯಿತಿ ನೀಡಿದ್ದರು.

ಜಂತರ್‌ಮಂಥರ್‌ನಲ್ಲಿ ಮೇ ತಿಂಗಳಲ್ಲಿ ಭಾರತ ಕುಸ್ತಿ ಫೆಡರೇಷನ್ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್‌ ವಿರುದ್ದ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೂನಿಯಾ ಅವರು ಇತರ ಕುಸ್ತಿಪಟು/ ವ್ಯಕ್ತಿಗಳ ಜೊತೆ ಸೇರಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದರು ಎಂದು ದಹಿಯಾ ದಾವೆ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT