ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ದಿವ್ಯಾಂಶ್ ಪನ್ವಾರ್‌‌ಗೆ ಚಿನ್ನದ ಪದಕ, ಭಾರತ ಆಟಗಾರನಿಂದ ಹೊಸ ದಾಖಲೆ

Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಕೈರೊ: ಭಾರತದ ದಿವ್ಯಾಂಶ್‌ ಸಿಂಗ್ ಪನ್ವರ್ ಭಾನುವಾರ ನಡೆದ ಐಎಸ್‌ಎಸ್ಎಫ್ ವಿಶ್ವಕಪ್‌ನ ಪುರುಷರ 10 ಮೀಟರ್‌ ಏರ್‌ ರೈಫಲ್‌ ಫೈನಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ ದೇಶಕ್ಕೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟರು. 

ಈಜಿಪ್ತ್‌  ಇಂಟರ್‌ನ್ಯಾಷನಲ್‌ ಒಲಿಂಪಿಕ್ ಸಿಟಿ ಶೂಟಿಂಗ್‌ನಲ್ಲಿ 21 ವರ್ಷದ ಪನ್ವರ್‌ 253.7 ಅಂಕಗಳನ್ನು ಗಳಿಸುವ ಮೂಲಕ  ಕಳೆದ ವರ್ಷ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚೀನಾದ ಶೆಂಗ್ ಲಿಹಾವೊ ಅವರ 253.3 ಅಂಕಗಳನ್ನು ಹಿಂದಿಕ್ಕಿದ್ದರು.

ವಿಶ್ವ ದರ್ಜೆಯ 632.4 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ದಿವ್ಯಾಂಶ್ ಆರಂಭಿಕ ಫಾರ್ಮ್ ತೋರಿಸಿದ್ದರು. ನಂತರ 24 ಶಾಟ್‌ಗಳ ಫೈನಲ್‌ನಲ್ಲಿ ರೋಚಕ ನಿಖರ ಶೂಟಿಂಗ್‌ನೊಂದಿಗೆ ಮೇಲುಗೈ ಸಾಧಿಸಿದರು. ಬೆಳ್ಳಿ ಪದಕ ವಿಜೇತ ಇಟಲಿಯ ಡ್ಯಾನಿ ಸೊಲ್ಲಾಜೊ ಅವರನ್ನು 1.9 ಅಂಕಗಳಿಂದ ಹಿಂದಿಕ್ಕಿದರು.

ಸರ್ಬಿಯಾದ ಲಾಜರ್ ಕೊವಾಸೆವಿಕ್ ಕಂಚಿನ ಪದಕ ಗೆದ್ದರೆ, ಫೈನಲ್‌ನಲ್ಲಿ ಭಾರತದ ಅರ್ಜುನ್ ಬಬುಟಾ ಆರನೇ ಸ್ಥಾನ ಪಡೆದರು.

‘ಬಹಳ ಸಮಯದ ನಂತರ ಚಿನ್ನ ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ಶೂಟಿಂಗ್ ಮಾಡುತ್ತಿದ್ದೆ. ಆದರೆ ಮಿಸ್ ಮಾಡಿಕೊಳ್ಳುತ್ತಿದ್ದೆ. ಇದು ಮುಂಬರುವ ಟೂರ್ನಿಗಳಿಗೆ ಮತ್ತಷ್ಟು ವಿಶ್ವಾಸ ನೀಡುತ್ತದೆ’ ಎಂದು ದಿವ್ಯಾಂಶ್ ಗೆಲುವಿನ ನಂತರ ಹೇಳಿದರು.

ಒಲಿಂಪಿಕ್ ವರ್ಷದ ಮೊದಲ ಐಎಸ್ಎಸ್ಎಫ್ ವಿಶ್ವಕಪ್ ಹಂತದಲ್ಲಿ ಭಾರತ ಈಗ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT