ಬೆಂಗಳೂರು: ಕರ್ನಾಟಕದ ಬಾಲಕಿಯರ ತಂಡವು 3ನೇ ಸಬ್ ಜೂನಿಯರ್ ರಾಷ್ಟ್ರೀಯ ಡಾಜ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪುದುಚೇರಿಯ ರಾಜೀವ್‌ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನ ನಡೆದ ಕೂಟದಲ್ಲಿ ಕರ್ನಾಟಕದ ಬಾಲಕರ ತಂಡವು ಚತುರ್ಥ ಸ್ಥಾನ ಪಡೆಯಿತು.
ಬಾಲಕಿಯರ ಫೈನಲ್‌ನಲ್ಲಿ ದೀಪ್ಸಿಖಾ ಗದ್ದಮ್ ನೇತೃತ್ವದ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಗುಜರಾತ್ ಮತ್ತು ಆತಿಥೇಯ ಪುದುಚೇರಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು.
ಬಾಲಕರ ವಿಭಾಗದಲ್ಲಿ ತಮಿಳುನಾಡು ತಂಡ ಚಾಂಪಿಯನ್ ಆದರೆ, ಹರಿಯಾಣ ಮತ್ತು ಪುದುಚೇರಿ ತಂಡಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದವು.
ಕೂಟದಲ್ಲಿ 24 ತಂಡಗಳು ಭಾಗವಹಿಸಿದ್ದವು. ಕರ್ನಾಟಕದ ವರ್ಷರಾಜ್ ಅತ್ಯುತ್ತಮ ಆಟಗಾರ್ತಿ ಮತ್ತು ತಮಿಳುನಾಡಿನ ಗೋಕುಲ್ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದರು.