ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ವಿರುದ್ಧ ನಕಲಿ ವಿಡಿಯೊ: ಎಫ್‌ಐಆರ್‌ ದಾಖಲು

Published 18 ಜನವರಿ 2024, 15:45 IST
Last Updated 18 ಜನವರಿ 2024, 15:45 IST
ಅಕ್ಷರ ಗಾತ್ರ

ಮುಂಬೈ:  ಸುಲಭವಾಗಿ ಹಣ ಗಳಿಸಲು ಗೇಮಿಂಗ್ ಆ್ಯಪ್‌ ಬಳಸುವಂತೆ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಚಾರ ಮಾಡುತ್ತಿದ್ದಾರೆ ಎಂಬ ನಕಲಿ ವಿಡಿಯೊ ಹರಿದಾಡಿದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಆನ್‌ಲೈನ್‌ ಆಟದ ಸೇವೆ ಒದಗಿಸುವ ಜಾಲತಾಣ ಮತ್ತು ಫೇಸ್‌ಬುಕ್ ಪುಟದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪಶ್ಚಿಮ ವಲಯದ ಸೈಬರ್ ಪೊಲೀಸ್ ಠಾಣೆಯಲ್ಲಿ ಸಚಿನ್ ಅವರ ಆಪ್ತ ಸಹಾಯಕ ಮಂಗಳವಾರ ಸಲ್ಲಿಸಿದ ದೂರಿನ ಮೇರೆಗೆ  ಐಪಿಸಿ ಸೆಕ್ಷನ್ 500 (ಮಾನಹಾನಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಎ) (ಸಂವಹನ ಸೇವೆಯ ಮೂಲಕ ಆಕ್ರಮಣಕಾರಿ ಸಂದೇಶ ಕಳುಹಿಸುವುದು) ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ಗೇಮಿಂಗ್ ಆ್ಯಪ್ ಉತ್ತೇಜಿಸುವಂತೆ ಸಚಿನ್ ತೆಂಡೂಲ್ಕರ್‌ ಪ್ರಚಾರ ಮಾಡುತ್ತಿದ್ದಾರೆ ಎಂಬ ನಕಲಿ ವಿಡಿಯೊ ಹರಿಯಬಿಡಲಾಗಿತ್ತು.

ಇತ್ತೀಚೆಗೆ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿನ್ ಸಾಮಾಜಿಕ ಜಾಲತಾಣಗಳ ತಮ್ಮ ಖಾತೆಯಲ್ಲಿ ವಿಡಿಯೊ ‍‍ಪೋಸ್ಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT