ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌ | ಎಂಟರ ಘಟ್ಟಕ್ಕೆ ಭಾರತದ ಐವರು

ಕಜಕಸ್ತಾನ ಚಾಲೆಂಜ್ ಟೂರ್ನಿ
Published 4 ಏಪ್ರಿಲ್ 2024, 15:05 IST
Last Updated 4 ಏಪ್ರಿಲ್ 2024, 15:05 IST
ಅಕ್ಷರ ಗಾತ್ರ

ಅಸ್ತಾನಾ: ಯುವ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ಮೋಲ್ ಖಾರ್ಬ್ ಅವರು ಸ್ಫೂರ್ತಿದಾಯಕ ಪ್ರದರ್ಶನ ಮುಂದುವರಿಸಿ ಕಜಕಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್ ಟೂರ್ನಿಯ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ತಲುಪಿದರು. ಅವರ ಜೊತೆ ಭಾರತದ ಇನ್ನೂ ನಾಲ್ಕು ಮಂದಿ ಗುರುವಾರ ಎಂಟರ ಘಟ್ಟ ತಲುಪಿದರು.

ದೇವಿಕಾ ಸಿಹಾಗ್, ಮಾಜಿ ರಾಷ್ಟ್ರೀಯ ಚಾಂಪಿಯನ್ ಅನುಪಮಾ ಉಪಾಧ್ಯಾಯ, ಏಳನೇ ಶ್ರೇಯಾಂಕದ ತನ್ಯಾ ಹೇಮಂತ್‌ ಮತ್ತು ಇಶಾರಾಣಿ ಬರೂವಾ ಅವರು ಕ್ವಾರ್ಟರ್‌ಫೈನಲ್ ತಲುಪಿದ ಭಾರತದ ಇತರ ನಾಲ್ವರು.

ಹಾಲಿ ರಾಷ್ಟ್ರೀಯ ಚಾಂಪಿಯನ್ ಅನ್ಮೋಲ್ ಎರಡನೇ ಸುತ್ತಿನ ಪಂದ್ಯದಲ್ಲಿ 21–11, 21–7 ರಿಂದ ಯುಎಇಯ ನುರಾನಿ ರತು ಅಝ್ರಾ ಮೇಲೆ ಜಯಗಳಿಸಿದರು. 17 ವರ್ಷದ ಅನ್ಮೋಲ್ ಅವರ ಮುಂದಿನ ಎದುರಾಳಿ ಜಪಾನ್‌ನ ಸೊರಾನೊ ಯೊಶಿಕಾವಾ.

ಈ ಋತುವಿನಲ್ಲಿ ನಾಲ್ಕು ಇಂಟರ್‌ನ್ಯಾಷನಲ್ ಚಾಲೆಂಜ್‌ ಟೂರ್ನಿಗಳಲ್ಲಿ ಫೈನಲ್ ತಲುಪಿ ಎರಡರಲ್ಲಿ (ಸ್ವೀಡಿಷ್‌ ಓಪನ್ ಮತ್ತು ಪೋರ್ಚುಗಲ್ ಇಂಟರ್‌ನ್ಯಾಷನಲ್‌ನಲ್ಲಿ) ಪ್ರಶಸ್ತಿ ಗೆದ್ದಿರುವ ದೇವಿಕಾ 21–12, 21–12 ರಿಂದ ನಾಲ್ಕನೇ ಶ್ರೇಯಾಂಕದ ಕೀಶಾ ಫಾತಿಮಾ ಅಝಾರಾ (ಅಜರ್‌ಬೈಜಾನ್‌) ಅವರನ್ನು ಹಿಮ್ಮೆಟ್ಟಿಸಿದರು. ದೇವಿಕಾ ಮುಂದಿನ ಸುತ್ತಿನಲ್ಲಿ ಸ್ವದೇಶದ ಅನುಪಮಾ ವಿರುದ್ಧ ಆಡಲಿದ್ದಾರೆ. ಅನುಪಮಾ ಇನ್ನೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕದ ತೆರೇಸಾ ಸ್ವಾಬಿಕೋವಾ (ಝೆಕ್‌ ರಿಪಬ್ಲಿಕ್‌) ಅವರನ್ನು ಪರಾಭವಗೊಳಿಸಿದರು.

ಏಳನೇ ಶ್ರೇಯಾಂಕದ ತಾನ್ಯಾ 21–11, 21–18 ರಿಂದ ಕ್ಸೇನಿಯಾ ಪೊಲಿಕಾರ್ಪೊವಾ ಅವರನ್ನು ಸೋಲಿಸಿದರು. ತಾನ್ಯಾ ಕ್ವಾರ್ಟರ್‌ಫೈನಲ್‌ನಲ್ಲಿ ಸ್ವದೇಶದ ಇಶಾರಾಣಿ ಎದುರು ಆಡಲಿದ್ದಾರೆ. ಇಶಾರಾಣಿ ಇನ್ನೊಂದು ಪಂದ್ಯದಲ್ಲಿ 21–10, 21–14 ರಿಂದ ನ್ಯೂಜಿಲೆಂಡ್‌ನ ಟಿಫಾನಿ ಹೊ ಮೇಲೆ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT