ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕೇನ್‌ ಮಾರಾಟ ಆರೋಪ: ಮೆಕ್‌ಗಿಲ್‌ ಬಂಧನ

Published 15 ಸೆಪ್ಟೆಂಬರ್ 2023, 14:44 IST
Last Updated 15 ಸೆಪ್ಟೆಂಬರ್ 2023, 14:44 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ): ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ ತಂಡದ ಮಾಜಿ ಲೆಗ್‌ಸ್ಪಿನ್ನರ್‌ ಸ್ಟುವರ್ಟ್‌ ಮೆಕ್‌ಗಿಲ್‌ ಅವರನ್ನು ಮಾದಕ ದ್ರವ್ಯ ಕೊಕೇನ್‌ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಇಬ್ಬರು ವ್ಯಕ್ತಿಗಳಿಗೆ ₹ 2.74 ಕೋಟಿಗೂ ಹೆಚ್ಚು ಮೌಲ್ಯದ ಕೊಕೇನ್ ಮಾರಾಟದ ವ್ಯವಹಾರ ಕುದುರಿಸಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಶಸ್ತ್ರಸಜ್ಜಿತ ಗುಂಪೊಂದು 2021ರ ಏಪ್ರಿಲ್‌ನಲ್ಲಿ ಮೆಕ್‌ಗಿಲ್‌ ಅವರನ್ನು ಉತ್ತರ ಸಿಡ್ನಿಯಲ್ಲಿರುವ ಅಪಾರ್ಟ್‌ಮೆಂಟ್‌ ಬಳಿಯಿಂದ ಅಪಹರಿಸಿದ್ದ ಘಟನೆ ನಡೆದಿತ್ತು. ‘ಅಪಹರಣಕಾರರು ನನ್ನನ್ನು ವಿವಸ್ತ್ರಗೊಳಿಸಿ, ಥಳಿಸಿದ್ದರಲ್ಲದೆ ಬೆದರಿಕೆ ಹಾಕಿದ್ದರು’ ಎಂದು ಮೆಕ್‌ಗಿಲ್‌ ಅಂದು ದೂರಿದ್ದರು.

ಆ ಘಟನೆ ಬಗ್ಗೆ ವಿಸ್ತೃತ ತನಿಖೆ ನಡೆಸಿರುವ ಪೊಲೀಸರು, ‘ಮೆಕ್‌ಗಿಲ್‌ ಅವರ ಅಪಹರಣ ಘಟನೆಗೂ ಮಾದವ ದ್ರವ್ಯ ಮಾರಾಟ ವ್ಯವಹಾರಕ್ಕೂ ನಂಟು ಇದೆ’ ಎಂದು ಆರೋಪಿಸಿದ್ದಾರೆ.

ಮೆಕ್‌ಗಿಲ್‌ ಅವರು ಆಸ್ಟ್ರೇಲಿಯಾ ಪರ 44 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT