ಚೆನ್ನೈ: ಇಂಡಿಯನ್ ರೇಸಿಂಗ್ ಫೆಸ್ಟಿವಲ್ನ ಭಾಗವಾಗಿರುವ FIA ಮಾನ್ಯತೆ ಪಡೆದ ಫಾರ್ಮುಲಾ-4 ಇಂಡಿಯನ್ ಚಾಂಪಿಯನ್ಶಿಪ್ ಫಿನಾಲೆ (F4IC) ಇದೇ ಡಿಸೆಂಬರ್ 13 ಹಾಗೂ 14ರಂದು ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ನಡೆಯಲಿದೆ.

ಕೀನ್ಯಾದ ರೇಸರ್ ಶೇನ್ ಚಂದಾರಿಯಾ (ಚೆನ್ನೈ ಟರ್ಬೊ ರೈಡರ್ಸ್) 158 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಚೆನ್ನೈಗೆ ಆಗಮಿಸುತ್ತಿದ್ದಾರೆ. ಅವರು ಈ ವರ್ಷದ ಗ್ರಿಡ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಚಾಲಕರಾಗಿದ್ದಾರೆ.

ಫ್ರೆಂಚ್ ಚಾಲಕ ಸಾಚೆಲ್ ರೊಟ್ಗೆ (ಕಿಚ್ಚಾ ಕಿಂಗ್ಸ್ ಬೆಂಗಳೂರು) 134 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇದಕ್ಕೂ ಮೊದಲು ನಡೆದ 2ನೇ ಸುತ್ತಿನಲ್ಲಿ ಎರಡು ಗೆಲುವುಗಳನ್ನು ತನ್ನದಾಗಿಸಿಕೊಂಡಿರುವ ಸಾಚೆಲ್ ಅವರು, ಕೊಯಮತ್ತೂರಿನಲ್ಲೂ ಜಯ ಸಾಧಿಸಿ ಈಗ ಫಿನಾಲೆ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಭಾರತದ ಯುವ ಪ್ರತಿಭೆ ಇಶಾನ್ ಮಾದೇಶ್ (ಕೊಲ್ಕತಾ ರಾಯಲ್ ಟೈಗರ್ಸ್) 127 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಸೀಸನ್ನ ಮೊದಲ ಭಾಗದಲ್ಲೇ ಚೆನ್ನೈನಲ್ಲಿ ಗೆಲುವು ಗಳಿಸಿರುವ ಅವರು ಶೇನ್ ಮತ್ತು ಸಾಚೆಲ್ ಇಬ್ಬರಿಗೂ ಕಠಿಣ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
.ಎಫ್-1 ರೇಸ್ನಿಂದ ದೇಶದ ಜನತೆಗೆ ಯಾವುದೇ ಲಾಭ ಇಲ್ಲ.ಎಫ್–1: ಹ್ಯಾಮಿಲ್ಟನ್ಗೆ ಪೋಲ್ ಪೋಸಿಷನ್.
ಸಾಯಿ ಶಿವ ಶಂಕರನ್ (ಸ್ಪೀಡ್ ಡೆಮನ್ಸ್ ದೆಹಲಿ), ಘಾಜಿ ಮೊಟ್ಲೆಕರ್ (ಕೋಲ್ಕತ್ತಾ ರಾಯಲ್ ಟೈಗರ್ಸ್), ಮತ್ತು ಲುವಿವೆ ಸಂಬುಡ್ಲಾ (ಗೋವಾ ಏಸಸ್ ಜೆಎ ರೇಸಿಂಗ್) ಸೇರಿದಂತೆ ಅನೇಕ ಚಾಲಕರು ನಿರಂತರವಾಗಿ ಕಠಿಣ ಹೋರಾಟ ನೀಡುತ್ತಾ, ನಿಯಮಿತವಾಗಿ ಅಗ್ರಸ್ಥಾನ ಪಡೆಯಲು ಪೈಪೋಟಿ ನಡೆಸಿದ್ದಾರೆ.

ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್, ವೇಗದ ತಿರುವುಗಳು ಮತ್ತು ಸವಾಲಿನ ಬ್ರೇಕಿಂಗ್ ಜೋನ್ಗಳಿಂದಲೇ ಪ್ರಸಿದ್ಧವಾಗಿದೆ. ಇಂಡಿಯನ್ ರೇಸಿಂಗ್ ಫೆಸಿವಲ್ ಅಂತಿಮ ಘಟ್ಟ ತಲುಪಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಸ್ಪರ್ಧಿಗಳು ಪೈಪೋಟಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.