ಪ್ಯಾರಿಸ್: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದರು.

ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ನೊವಾಕ್ 6–4, 6–1, 6–2ರಿಂದ ಸ್ಪೇನ್ ದೇಶದ ರಾಬರ್ಟೊ ಕಾರ್ಬೆಲೆಸ್ ಬೇಯ್ನಾ ವಿರುದ್ಧ ಗೆದ್ದರು.

ತಮ್ಮ ವೃತ್ತಿಜೀವನದ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೊವಾಕ್ ಮೊದಲ ಸೆಟ್‌ನಲ್ಲಿ ಸ್ಪೇನ್ ಆಟಗಾರನಿಂದ ತುಸು ಪೈಪೋಟಿ ಎದುರಿಸಿದರು.

ಈ ಸೆಟ್‌ನ ಒಂಬತ್ತನೇ ಗೇಮ್‌ನಲ್ಲಿ 37 ವರ್ಷದ ನೊವಾಕ್ ಬ್ರೇಕ್ ಪಾಯಿಂಟ್ ಪಡೆದರು. 24 ಶಾಟ್‌ಗಳ ರ‍್ಯಾಲಿಯ ನಂತರ ದೊಡ್ಡ ಸ್ಮ್ಯಾಷ್ ಹೊಡೆದ ನೊವಾಕ್ ಈ ಪಾಯಿಂಟ್ ಗಿಟ್ಟಿಸಿದರು.

ನಂತರದ ಸೆಟ್‌ನಲ್ಲಿ ನೊವಾಕ್4–0 ಮುನ್ನಡೆ ಸಾಧಿಸಿದರು. ಈ ಹಂತದಲ್ಲಿ 31 ವರ್ಷದ ಬೆಯ್ನಾ ಅವರು ತಿರುಗೇಟು ನೀಡುವ ಪ್ರಯತ್ನ ಮಾಡಿದರು. ಒಂದು ಗೇಮ್ ಗೆದ್ದರು. ಆದರೆ ನೊವಾಕ್ ಸೆಟ್ ಬಿಟ್ಟು ಕೊಡಲಿಲ್ಲ. ಕೊನೆಯ ಸೆಟ್‌ನಲ್ಲಿಯೂ ತಮ್ಮ ಅನುಭವದ ಆಟದ ಮೂಲಕ ನೊವಾಕ್ ಪಾರಮ್ಯ ಮೆರೆದರು.

ಜ್ವೆರೆವ್ ಮುನ್ನಡೆ: ಈ ಟೂರ್ನಿಯ ಮೊದಲ ಸುತ್ತಿ ನಲ್ಲಿ ರಫೆಲ್ ನಡಾಲ್ ಅವರನ್ನು ಮಣಿಸಿದ್ದ ಅಲೆಕ್ಸಾಂಡರ್ ಜ್ವೆರೆವ್ 32ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

ನಾಲ್ಕನೇ ಶ್ರೇಯಾಂಕದ ಜ್ವೆರೆವ್ 7–6, 6–2, 6–2ರಿಂದ ಬೆಲ್ಜಿಯಂ ದೇಶದ ಡೇವಿಡ್ ಗಾಫಿನ್ ವಿರುದ್ಧ ಜಯಿಸಿದರು.

ಜ್ವೆರೆವ್ ಅವರು ಮುಂದಿನ ಸುತ್ತಿನಲ್ಲಿ ಇಟಲಿಯ ಲೂಸಿಯಾನೊ ದಾರ್ದೇರಿ ಅಥವಾ ನೆದರ್ಲೆಂಡ್ಸ್‌ನ ಟಾಲನ್ ಗ್ರೀಕ್‌ಸ್ಪೂರ್ ಅವರನ್ನು ಎದುರಿಸುವ ಸಾಧ್ಯತೆ ಇದೆ.

ಜ್ವೆರೆವ್ ಅವರು ಈಚೆಗೆ ರೋಮ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ನಂತರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಪುರುಷರ ವಿಭಾಗದ ಎರಡನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ; ಇಟಲಿಯ ಮ್ಯಾಡಿಯೊ ಅರ್ನಾಲ್ಡಿ 6–4, 6–1, 6–3ರಿಂದ ಫ್ರಾನ್ಸ್‌ನ ಅಲೆಕ್ಸಾಂಡ್ರೆ ಮುಲ್ಲರ್ ವಿರುದ್ಧ; ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ 6–4, 6–4, 1–6, 6–3ರಿಂದ ಕೊರಿಯಾದ ಕೆವೊನ್ ಸೂನ್ ವೂ ವಿರುದ್ಧ; ಬಲ್ಗೇರಿಯಾದ 10ನೇ ಕ್ರಮಾಂಕದ ಗ್ರಿಗೊರ್ ಡಿಮಿಟ್ರೊವ್ 6–0, 6–3, 6–4ರಿಂದ ಹಂಗರಿಯ ಫ್ಯಾಬಿಯಾನ್ ಮಾರೊಜ್ಸನ್ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಸರ್ಬಿಯಾದ ಮಿಯಾಮಿರ್ ಕೆಚಮಾನೊವಿಚ್ ಅವರು ರಷ್ಯಾದ ಡೇನಿಯಲ್ ಮೆಡ್ವೆಡೆವ್ ಎದುರಿನ ಪಂದ್ಯದಲ್ಲಿ ಗಾಯಗೊಂಡು ನಿವೃತ್ತಿಯಾದರು. ಇದರಿಂದಾಗಿ ಮೆಡ್ವೆಡೆವ್ ಮುನ್ನಡೆ ಸಾಧಿಸಿದರು. ಮೆಡ್ವೆಡೆವ್ 6–1, 5–0ಯಿಂದ ಮುನ್ನಡೆಯಲ್ಲಿದ್ದರು.

ಮಹಿಳೆಯರ ವಿಭಾಗದ ಎರಡನೇ ಸುತ್ತಿನಲ್ಲಿ; ರಷ್ಯಾದ ಅನಾಸ್ತಾಸಿಯಾ ಪಾಟಪೊವಾ 6–2, 6–2ರಿಂದ ಸ್ವಿಸ್ ಆಟಗಾರ್ತಿ ವಿಕ್ಟೊರಿಯಾ ಗೊಲುಬಿಕ್ ವಿರುದ್ಧ; ಕ್ರೊವೆಷ್ಯಾದ ಡೊನಾ ವೆಕಿಕ್ 7–5, 6–4ರಿಂದ ಉಕ್ರೇನ್‌ನ ಮಾರ್ತಾ ಕೊಸ್ತಾಯುಕ್ ವಿರುದ್ಧ; ಉಕ್ರೇನ್‌ನ ಡಯಾನಾ ಯಸ್ತರೆಮ್ಸಕಾ 6–2, 6–0ಯಿಂದ ಚೀನಾದ ವಾಂಗ್ ಯಫಾನ್ ವಿರುದ್ಧ; 15ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ 6–4, 7–6 (7–3)ರಿಂದ ಫ್ರಾನ್ಸ್‌ನ ಡೆಯನಾ ಪೆರಿ ವಿರುದ್ಧ; ಕಜಕಸ್ತಾನದ ಎಲಿನಾ ರಿಬಾಕಿನಾ 6–3, 6–4ರಿಂದ ಅರಾಂಚಾ ರೂಸ್ ವಿರುದ್ಧ; ಬಲ್ಗೆರಿಯಾದ ಅರಿನಾ ಸಬಲೆಂಕಾ 6–2, 6–2ರಿಂದ ಮೊಯುಕಾ ಉಚಿಜಿಮಾ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.