ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಸಿನ್ನರ್‌, ಕೊಕೊಗೆ ಜಯ, ರುಬ್ಲೆವ್‌ಗೆ ಆಘಾತ

Published 1 ಜೂನ್ 2024, 0:43 IST
Last Updated 1 ಜೂನ್ 2024, 0:43 IST
ಅಕ್ಷರ ಗಾತ್ರ

ಪ್ಯಾರಿಸ್: ಭಾರತದ ಎನ್.ಶ್ರೀರಾಮ್ ಬಾಲಾಜಿ ಅವರು ಫ್ರೆಂಚ್ ಓಪನ್ ಟಿನಿಸ್ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದರು. ಆದರೆ, ಭಾರತದ ಮತ್ತೊಬ್ಬ ಸ್ಪರ್ಧಿ ಯೂಕಿ ಭಾಂಬ್ರಿ ಅವರು ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. 

ಪುರುಷರ ಡಬಲ್ಸ್‌ನಲ್ಲಿ ಬಾಲಾಜಿ ಮತ್ತು ಮೆಕ್ಸಿಕೊದ ಮಿಗುಯೆಲ್ ಏಂಜೆಲ್ ರೆಯೆಸ್ ವರೆಲಾ ಅವರು 6-3, 6-4 ಸೆಟ್‌ಗಳಲ್ಲಿ ಅಮೆರಿಕದ ರೀಸ್ ಸ್ಟಾಲ್ಡರ್ ಮತ್ತು ಡಚ್ ಆಟಗಾರ ಸೆಮ್ ವರ್ಬೀಕ್ ವಿರುದ್ಧ ಜಯ ಗಳಿಸಿದರು.

ಯೂಕಿ ಮತ್ತು ಅಲ್ಬಾನೊ ಒಲಿವೆಟ್ಟಿ ಜೋಡಿಯು ಆರಂಭಿಕ ಸುತ್ತಿನಲ್ಲಿ  ಆಸ್ಟ್ರೇಲಿಯಾದ ಜಾನ್ ಪಿಯರ್ಸ್‌ ಮತ್ತು ರಷ್ಯಾದ ರೋಮನ್ ಸಫಿಯುಲಿನ್ ವಿರುದ್ಧ 3-6, 6-7 (5) ಸೆಟ್‌ಗಳಿಂದ ಪರಾಭವಗೊಂಡರು. ‌ ಆರಂಭಿಕ ಸೆಟ್‌ನಲ್ಲಿ ಯೂಕಿ ಮತ್ತು ಅವರ ಫ್ರೆಂಚ್ ಜೊತೆಗಾರ ಪರದಾಡಿದರು. ಆದರೆ, ಎರಡನೇ ಸೆಟ್‌ನಲ್ಲಿ ತೀವ್ರ ಪೈಪೋಟಿ ನೀಡಿದರು.

ಬೋಪಣ್ಣ ಅವರು ಯೂಕಿ ಭಾಂಬ್ರಿ ಪಂದ್ಯವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿದರು. ಭಾರತದ ಅಗ್ರಗಣ್ಯ ಟೆನಿಸ್‌ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬಾಲಾಜಿ ಅಥವಾ ಭಾಂಬ್ರಿ  ಅವರಲ್ಲೊಬ್ಬರು ಜೊತೆಗಾರ ಆಗಲಿದ್ದಾರೆ. 

ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ಶನಿವಾರ ಅಭಿಯಾನ ಆರಂಭಿಸಲಿದೆ.

ರುಬ್ಲೆವ್‌ಗೆ ಆಘಾತ: ಪುರುಷರ ಸಿಂಗಲ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಆಂಡ್ರೆ ರುಬ್ಲೆವ್ 7-6 (6), 6-2, 6-4 ಸೆಟ್‌ಗಳಿಂದ ಮ್ಯಾಟಿಯೊ ಅರ್ನಾಲ್ಡಿ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದರು.

ಎರಡನೇ ಶ್ರೇಯಾಂಕದ ಆಟಗಾರ ಯಾನಿಕ್ ಸಿನ್ನರ್‌ 6-4, 6-4, 6-4 ಸೆಟ್ ಗಳಿಂದ ಪಾವೆಲ್ ಕೊಟೊವ್ ಅವರನ್ನು ಸೋಲಿಸಿದರು. ಸಿನ್ನರ್‌ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT