ಝಾಗ್ರೆಬ್ (ಕ್ರೊವೇಷ್ಯಾ): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರ ಮೇಲೆ ಸ್ಫೂರ್ತಿಯುತ ಗಲುವು ಸಾಧಿಸಿದರು. ಸೂಪರ್ ಯುನೈಟೆಡ್ ರ್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿಯ ಆನೇ ಸುತ್ತಿನ ನಂತರ ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು.

ಗುರುವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ದೊರೆತ ಗೆಲುವು ಗುಕೇಶ್ ಅವರಿಗೆ ಸತತ ಐದನೇಯದ್ದು. ಅವರು ಸಂಭವನೀಯ 12 ಪಾಯಿಂಟ್ಗಳಲ್ಲಿ 10 ಪಾಯಿಂಟ್ಸ್ ಕಲೆಹಾಕಿದ್ದಾರೆ.

ಭಾರತದ ಆಟಗಾರ ಪೋಲೆಂಡ್ನ ಯಾನ್ ಕ್ರಿಸ್ಟೋಫ್ ಡುಡಾ ಅವರಿಗಿಂತ ಎರಡು ಪಾಯಿಂಟ್ ಮುಂದೆಯಿದ್ದಾರೆ. ಏಳು ಪಾಯಿಂಟ್ ಗಳಿಸಿರುವ ಅಮೆರಿಕದ ವೆಸ್ಲಿ ಸೊ ಮೂರನೇ ಸ್ಥಾನದಲ್ಲಿ ಇದ್ದಾರೆ. ನಾರ್ವೆಯ ಕಾರ್ಲ್ಸನ್, ನೆದರ್ಲೆಂಡ್ಸ್ನ ಅನೀಶ್ ಗಿರಿ ಮತ್ತು ಸ್ಥಳೀಯ ಆಟಗಾರ ಇವಾನ್ ಸರಿಕ್ (ತಲಾ 6 ಪಾಯಿಂಟ್ಸ್) ಅವರು ನಾಲ್ಕರಿಂದ ಆರರವರೆಗಿನ ಸ್ಥಾನಗಳನ್ನು ಪಡೆದಿದ್ದಾರೆ.

ಆರ್.ಪ್ರಜ್ಞಾನಂದ ಮತ್ತು ಅಮೆರಿಕದ ಫ್ಯಾಬಿಯಾನೊ ಕರುವಾನ ತಲಾ ಐದು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಫ್ರಾನ್ಸ್ನ ಆಟಗಾರ ಅಲಿರೇಝಾ ಫಿರೋಝ್ಜಾ (4 ಪಾಯಿಂಟ್ಸ್) ಒಂಬತ್ತನೇ ಸ್ಥಾನ ಪಡೆದಿದ್ದಾರೆ. ನದಿರ್ಬೆಕ್ ಅಬ್ದುಸತ್ತಾರೋವ್ (3) ಕೊನೆಯ (10ನೇ) ಸ್ಥಾನದಲ್ಲಿದ್ದಾರೆ.

ನಾರ್ವೆ ಚೆಸ್ ಟೂರ್ನಿಯಲ್ಲಿ ಗುಕೇಶ್ ಎದುರು ಪರಾಭವ ಅನುಭವಿಸಿದ್ದ ವೇಳೆ ಕಾರ್ಲ್ಸನ್ ಹತಾಶೆಯಿಂದ ಜೋರಾಗಿ ಟೇಬಲ್ಗೆ ಗುದ್ದಿದ್ದರು. ಕ್ಲಾಸಿಕಲ್ (ಸಾಂಪ್ರದಾಯಿಕ) ಚೆಸ್ನಲ್ಲಿ ಗುಕೇಶ್ ಅವರು ಕಾರ್ಲ್ಸನ್ ವಿರುದ್ಧ ಗಳಿಸಿದ ಮೊದಲ ಜಯ ಅದಾಗಿತ್ತು.

ಕಿಂಗ್ ಪಾನ್ ಓಪನಿಂಗ್ ಕಂಡ ಈ ಆಟದಲ್ಲಿ ಕಾರ್ಲ್ಸನ್ ಆರಂಭದಲ್ಲಿ ಸ್ವಲ್ಪ ಅನುಕೂಲ ಹೊಂದಿದ್ದರು. ಆದರೆ ಗುಕೇಶ್ ಅವರು ಪರಿಪೂರ್ಣ ಪ್ರತಿಹೋರಾಟಕ್ಕೆ ನಾರ್ವೆಯ ಆಟಗಾರಬ ಬಳಿ ಉತ್ತರವಿರಲಿಲ್ಲ. 49 ನಡೆಗಳಲ್ಲಿ ಗುಕೇಶ್ ಜಯಗಳಿಸಿದರು.

ಈ ಪಂದ್ಯಕ್ಕೆ ಮೊದಲು ಗುಕೇಶ್ ಅವರು ಅಬ್ದುಸತ್ತಾರೋವ್ ಅವರನ್ನು ಮಣಿಸಿದ್ದರು.

ಪ್ರಜ್ಞಾನಂದ ಅವರಿಗೆ ಗುರುವಾರವೂ ಗೆಲುವು ಒಲಿಯಲಿಲ್ಲ. ಅವರು ಕರುವಾನ, ಕಾರ್ಲ್ಸನ್ ಮತ್ತು ಅನಿಶ್ ಗಿರಿ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.