ಬಾಕು: ಭಾರತದ ಡಿ.ಗುಕೇಶ್, ಆರ್.ಪ್ರಜ್ಞಾನಂದ ಮತ್ತು ಅರ್ಜುನ್ ಇರಿಗೇಶಿ ಅವರು ಇಲ್ಲಿ ನಡೆಯುತ್ತಿರುವ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಭಾನುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಗುಕೇಶ್ 1.5–0.5 ಪಾಯಿಂಟ್ಸ್‌ಗಳಿಂದ ಚೀನಾದ ವಾಂಗ್ ಹಾವೊ ವಿರುದ್ಧ ಗೆದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರ ಸವಾಲು ಎದುರಿಸಲಿದ್ದಾರೆ.

ಕಾರ್ಲ್‌ಸನ್, 16ರ ಘಟ್ಟದಲ್ಲಿ ಉಕ್ರೇನ್‌ನ ವಾಸಿಲಿ ಇವಾಂಚುಕ್ ಅವರನ್ನು ಮಣಿಸಿದರು.

ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಪ್ರಜ್ಞಾನಂದ ಮತ್ತು ಇರಿಗೇಶಿ ಎದುರಾಗಲಿದ್ದಾರೆ. 16ರ ಘಟ್ಟದಲ್ಲಿ ಇರಿಗೇಶಿ ಅವರು ಸ್ವೀಡನ್‌ನ ನೀಲ್ಸ್ ಗ್ರಾಂಡೆಲಿಯಸ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.