ನವದೆಹಲಿ: ಏಷ್ಯನ್ ಗೇಮ್ಸ್ ಪದಕವಿಜೇತ ಅಥ್ಲೀಟ್ ಗುಲ್ವೀರ್ ಸಿಂಗ್ ಅವರನ್ನು ಹಾಂಗ್ಕಾಂಗ್ನಲ್ಲಿ ನಡೆಯಲಿರುವ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಭಾರತೀಯ ಸೇನೆಯ ಉದ್ಯೋಗಿ 26 ವರ್ಷದ ಗುಲ್ವೀರ್ ಅವರು ಹೋದ ವರ್ಷ ಹಾಂಗ್ಝೌನಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ 10 ಸಾವಿರ ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಗಳಿಸಿದ್ದರು. ಹೋದ ತಿಂಗಳು ಜಪಾನಿನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ನಲ್ಲಿ ಅವರು 5 ಸಾವಿರ ಮೀಟರ್ಸ್ ಓಟದಲ್ಲಿ (13ನಿ,11.82ಸೆ) ಗಮನ ಸೆಳೆದಿದ್ದರು.

ಅಕ್ಟೋಬರ್ 20ರಂದು ಸ್ಪರ್ಧೆಯು ನಡೆಯಲಿದೆ.

ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ಅಧ್ಯಕ್ಷ ಅದಿಲ್ ಸುಮರಿವಾಲಾ ಅವರು ಸೋಮವಾರ ಪ್ರಕಟಿಸಿರುವ ತಂಡ ಇಂತಿದೆ;

ಪುರುಷರು: ಗುಲ್ವೀರ್ ಸಿಂಗ್, ಕಾರ್ತಿಕ್ ಕುಮಾರ್, ಅಭಿಷೇಕ್ ಪಾಲ್, ಅರುಣ್ ರಾಥೋಡ್.

ಮಹಿಳೆಯರು: ಅಂಕಿತಾ, ಸೀಮಾ, ಸಂಜೀವನಿ ಜಾಧವ್, ಸೋನಿಕಾ.

ಜೂನಿಯರ್ ಬಾಲಕರು: ಅಮರದೀಪ್ ಪಾಲ್, ಕೃಪಾಶಂಕರ್ ಯಾದವ್, ವಿನೋದ್ ಸಿಂಗ್, ಗೌರವ್ ಭಾಸ್ಕರ್ ಭೋಸಲೆ.

ಜೂನಿಯರ್ ಬಾಲಕಿಯರು: ಏಕ್ತಾ ಡೇ, ಸುನಿತಾ ದೇವಿ, ಶಿಲ್ಪಾ ದಿಯೊರಾ, ಪ್ರಾಚಿ ಅಂಕುಶ್ ದೇವಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.