ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ: ಚೆಪ್ಪುಡಿರ, ಕುಲ್ಲೇಟಿರ ತಂಡಕ್ಕೆ ಭರ್ಜರಿ ಗೆಲುವು

Published 21 ಏಪ್ರಿಲ್ 2024, 20:38 IST
Last Updated 21 ಏಪ್ರಿಲ್ 2024, 20:38 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು ಜಿಲ್ಲೆ): ಚೆಪ್ಪುಡಿರ ತಂಡವು ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಬಾಳೆಯಡ ತಂಡದ ವಿರುದ್ಧ 6-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.

ಚೆಪ್ಪುಡಿರ ತಂಡದ ಗಗನ್ ತಿಮ್ಮಯ್ಯ, ಪ್ರಣವ್ ತಿಮ್ಮಯ್ಯ, ಗಗನ್ ಬೆಳ್ಯಪ್ಪ, ಚೇತನ್ ಹಾಗೂ ನರೇನ್ ಗಳಿಸಿದ ಗೋಲುಗಳು ತಂಡದ ಗೆಲುವಿಗೆ ಸಹಕಾರಿಯಾದವು.

ಮತ್ತೊಂದು ಪಂದ್ಯದಲ್ಲಿ, ಕುಲ್ಲೇಟಿರ ತಂಡವು ಅವಿನಾಶ್ ಹಾಗೂ ಯಾಶಿಕ್‌ ಗಳಿಸಿದ ತಲಾ 2 ಗೋಲು ಹಾಗೂ ನಿಶ್ಚಲ್ 1 ಗೋಲಿನ ನೆರವಿನಿಂದ ಕೊಕ್ಕಂಡ ವಿರುದ್ದ 5-2 ಅಂತರದಿಂದ ಜಯಸಾಧಿಸಿತು. ಕೊಕ್ಕಂಡ ತಂಡದ ಸುಬ್ಬಯ್ಯ, ಚಿರಾಗ್ ತಲಾ 1 ಗೋಲು ಗಳಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ.

ದಿನದ ಉಳಿದ ಪಂದ್ಯಗಳಲ್ಲಿ, ಚೆಕ್ಕೇರ ತಂಡವು ಚೇನಂಡ ತಂಡವನ್ನು 2–0 ಅಂತರದಿಂದ; ಪುದಿಯೊಕ್ಕಡ ತಂಡವು ಪುಲ್ಲಂಗಡ ತಂಡವನ್ನು 2–0 ಅಂತರದಿಂದ; ಕಂಬೀರಂಡ ತಂಡವು ಚೇಂದಂಡವನ್ನು 2-1 ಅಂತರದಿಂದ; ಐನಂಡ ತಂಡವು ಮಂಡೆಪಂಡ ವಿರುದ್ಧ 3-2 ಅಂತರದಿಂದ; ಕರಿನೆರವಂಡ ತಂಡವು ಚೋಯಮಾಡಂಡ ವಿರುದ್ಧ 3-0 ಅಂತರದಿಂದ; ಬೋವ್ವೇರಿಯಂಡ ತಂಡವು ಚೇಂದಿರ ವಿರುದ್ಧ 2-1 ಅಂತರದಿಂದ; ಐಚೆಟ್ಟಿರ ತಂಡವು ಕೇಲೇಟಿರ ವಿರುದ್ಧ 1-0 ಅಂತರದಿಂದ ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT