ಚಂಡೀಗಡ: ತೀವ್ರ ಅನಾರೋಗ್ಯದಿದ ಇಲ್ಲಿನ ಆಸ್ಪತ್ರೆಗೆ ದಾಖಲಾಗಿರುವ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಸೀನಿಯರ್ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರು ಶ್ವಾಸಕೋಸದ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ ಹೃದಯಸ್ತಂಭನಕ್ಕೆ ಒಳಗಾದ 95 ವರ್ಷದ ಬಲ್ಬೀರ್ ಅವರಿಗೆ ತಡರಾತ್ರಿ ಮತ್ತೆ ಹೃದಯ ತೊಂದರೆ ತೀವ್ರಗೊಂಡಿತ್ತು ಎಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ,

ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನದ ಪದಕ ಗೆದ್ದುಕೊಂಡಿರುವ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ ಮೊಮ್ಮಗ ಕಬೀರ್ ಮಂಗಳವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದ್ದರು.

ತೀವ್ರ ಜ್ವರದ ಕಾರಣ ಕಳೆದ ಶುಕ್ರವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದಾರೆ.

ಹಿರಿಯ ಆಟಗಾರ ಬೇಗ ಚೇತರಿಸಿಕೊಳ್ಳಲೆಂದು ಹಾರೈಸಿ ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಆಧುನಿಕ ಒಲಿಂಪಿಕ್ ಇತಿಹಾಸದ 16 ದಂತಕತೆಗಳಲ್ಲಿ ಒಬ್ಬರು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅವರನ್ನು ಆಯ್ಕೆ ಮಾಡಿದ್ದು, ಈ ಗೌರವ ಪಡೆದ ಏಕಮಾತ್ರ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು.

ಒಲಿಂಪಿಕ್ಸ್ ಪುರುಷರ ಹಾಕಿ ಫೈನಲ್‌ನಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಗೋಲು ಬಾರಿಸಿರುವ ದಾಖಲೆಯೂ ಅವರ ಹೆಸರಿನಲ್ಲಿ ಉಳಿದಿದೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನ ಫೈನಲ್ಸ್‌ನಲ್ಲಿ ಭಾರತ 6–1 ರಿಂದ ನೆದರ್ಲೆಂಡ್ಸ್ ತಂಡವನ್ನು ಸದೆಬಡಿದ ಸಂದರ್ಭದಲ್ಲಿ ಬಲ್ಬೀರ್ ಐದು ಗೋಲುಗಳನ್ನು ಗಳಿಸಿದ್ದರು. 1975ರಲ್ಲಿ ಭಾರತ ಏಕೈಕ ವಿಶ್ವಕಪ್ ಹಾಕಿ ಕಿರೀಟ ಗೆದ್ದ ಸಂದರ್ಭದಲ್ಲಿ ಅವರು ತಂಡದ ಮ್ಯಾನೇಜರ್ ಆಗಿದ್ದರು.

1957ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.