ನವದೆಹಲಿ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡೆಗಳಲ್ಲಿ ಹಾಕಿಯಲ್ಲಿ ಚಿನ್ನದ ಪದಕ ಗೆಲ್ಲುವ ನಿಟ್ಟಿನಲ್ಲಿ ಭವಿಷ್ಯದ ಯೋಜನೆಗಳ ರೂಪುರೇಷೆ ಸಿದ್ಧಪಡಿಸಲು ಸೆಪ್ಟೆಂಬರ್ 10ಕ್ಕೆ ಮೊದಲು ತಾವು ಭಾರತ ಹಾಕಿ ತಂಡದ ಜೊತೆ ಸಭೆ ನಡೆಸುವುದಾಗಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಮಂಗಳವಾರ ತಿಳಿಸಿದರು.

ಭಾರತ ಪುರುಷರ ಹಾಕಿ ತಂಡ ಪ್ಯಾರಿಸ್ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು. ಮಂಗಳವಾರ ಬೆಳಿಗ್ಗೆ ಪ್ಯಾರಿಸ್‌ನಿಂದ ಬಂದಿಳಿದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್, ಸಂಜಯ್, ಅಮಿತ್ ರೋಹಿದಾಸ್ ಮತ್ತು ಅಭಿಷೇಕ್ ಅವರನ್ನು ಸನ್ಮಾನಿಸಿದ ಅವರು ಮಾತನಾಡಿದರು.

‘ಪ್ಯಾರಿಸ್‌ನಲ್ಲಿ ಹಾಕಿ ತಂಡದ ಪ್ರದರ್ಶನ ಅಮೋಘವಾಗಿತ್ತು. ನಾವು ಚಿನ್ನದ ಪದಕ ಗೆಲ್ಲದೇ ಹೋಗಿರಬಹುದು. ಆದರೆ ಅದಕ್ಕೆ ತೀರಾ ಹತ್ತಿರವಾಗಿದ್ದೆವು. ಸೆಮಿಫೈನಲ್‌ನಲ್ಲಿ ಸೋತರೂ ಆಟ ಮೆಚ್ಚುವಂತಿತ್ತು’ ಎಂದು ಸಚಿವರು ಹೇಳಿದರು.

ಟೋಕಿಯೊ ಕ್ರೀಡೆಗಳಷ್ಟು ಪದಕ ಗೆಲ್ಲದಿದ್ದರೂ, ಪ್ಯಾರಿಸ್‌ನಲ್ಲಿ ಭಾಗವಹಿಸಿದ್ದ ಭಾರತದ ಪಾಳಯದ ಪ್ರದರ್ಶನ ಉತ್ತಮವಾಗಿತ್ತು ಎಂದರು. 2021ರಲ್ಲಿ ನಡೆದ ಕ್ರೀಡೆಗಳಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿ ಒದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತದ ಕ್ರೀಡಾಪಟುಗಳು ಗೆದ್ದಿದ್ದಾರೆ. ಆದರೆ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಏಳು ಸ್ಪರ್ಧೆಗಳಲ್ಲಿ ಪದಕಗಳು ಅಲ್ಪದರಲ್ಲೇ ಕೈತಪ್ಪಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.