ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games: 40 ವರ್ಷಗಳ ನಂತರ ಈಕ್ವೆಸ್ಟ್ರಿಯನ್‌ನಲ್ಲಿ ಚಿನ್ನ ಗೆದ್ದ ಭಾರತ

Published 26 ಸೆಪ್ಟೆಂಬರ್ 2023, 10:21 IST
Last Updated 26 ಸೆಪ್ಟೆಂಬರ್ 2023, 10:21 IST
ಅಕ್ಷರ ಗಾತ್ರ

ಹಾಂಗ್‌ಝೌ: ನವದೆಹಲಿಯಲ್ಲಿ 1982ರಲ್ಲಿ ನಡೆದ ಏಷ್ಯನ್ ಕ್ರೀಡೆಯ ನಂತರ ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಆಮೂಲಕ 41 ವರ್ಷಗಳ ದಾಖಲೆಯನ್ನು ಮುರಿದಿದೆ.

ದಿವ್ಯಕೃತಿ ಸಿಂಗ್‌, ಹೃದಯ್ ವಿಪುಲ್ ಛಡ್‌ ಹಾಗೂ ಅನ್ಶು ಅಗರ್ವಾಲ್‌ ಅವರಿದ್ದ ತಂಡ 209.205 ಶೇಕಡಾವಾರು ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿತು.

ಇದೇ ತಂಡದಲ್ಲಿ ಸುದೀಪ್ತಿ ಹಜೆವಾಲಾ ಅವರೂ ಇದ್ದರು. ಆದರೆ ಹೆಚ್ಚಿನ ಅಂಕ ಪಡೆದ ಮೊದಲ ಮೂವರ ಹೆಸರನ್ನು ಪರಿಗಣಿಸಲಾಗಿದೆ. 204.882 ಶೇಖಡಾವಾರು ಅಂಕಗಳೊಂದಿಗೆ ಚೀನಾ ಎರಡನೇ ಸ್ಥಾನ ಪಡೆಯಿತು. ಹಾಂಕಾಂಗ್‌ 204.852 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

1986ರಲ್ಲಿ ನಡೆದ ಇದೇ ಪಂದ್ಯಾವಳಿಯಲ್ಲಿ ಭಾರತ ಕಂಚಿನ ಪದಕ ಪಡೆದುಕೊಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT