ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್‌ ಗೇಮ್ಸ್‌: 634 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ

Published 25 ಆಗಸ್ಟ್ 2023, 15:35 IST
Last Updated 25 ಆಗಸ್ಟ್ 2023, 15:35 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ಸೆ.23ರಿಂದ ನಡೆಯುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ 634 ಕ್ರೀಡಾಪಟುಗಳ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಿದೆ. 2018ರಲ್ಲಿ ನಡೆದ ಆವೃತ್ತಿಯಲ್ಲಿ 572 ಮಂದಿ ಭಾಗವಹಿಸಿದ್ದರು.‌

ಭಾರತ ಒಲಿಂಪಿಕ್ ಸಂಸ್ಥೆ ​​(ಐಒಎ) ಒಟ್ಟು 850 ಕ್ರೀಡಾಪಟುಗಳನ್ನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ 34 ಪುರುಷರು ಮತ್ತು 31 ಮಹಿಳೆಯರು ಸೇರಿದಂತೆ ಒಟ್ಟು 65 ಕ್ರೀಡಾಪಟುಗಳಿಗೆ ಹಸಿರುನಿಶಾನೆ ತೋರಿದೆ.

ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ 22ರಂತೆ ಒಟ್ಟು 44 ಫುಟ್‌ಬಾಲ್‌ ಆಟಗಾರರು, ಹಾಗೆಯೇ ತಲಾ 18 ರಂತೆ ಒಟ್ಟು 36 ಹಾಕಿ ಆಟಗಾರರು, ತಲಾ 15 ರಂತೆ ಒಟ್ಟು 30 ಕ್ರಿಕೆಟ್‌ ಆಟಗಾರರು ಪಾಲ್ಗೊಳ್ಳಲಿದ್ದಾರೆ. ‌‌

ಶೂಟಿಂಗ್‌ ಸ್ಪರ್ಧೆಗೆ 30 ಮಂದಿಯ ತಂಡ, ಸೇಲಿಂಗ್‌ ಸ್ಪರ್ಧೆಗೆ 33 ಆಟಗಾರರನ್ನು ಅಂತಿಮಗೊಳಿಸಲಾಗಿದೆ. ಚೆಸ್‌ ತಂಡದಲ್ಲಿ ಚೆಸ್‌ ವಿಶ್ವಕಪ್‌ ಟೂರ್ನಿಯ ರನ್ನರ್‌ ಅಪ್‌ ಆರ್‌. ಪ್ರಜ್ಞಾನಂದ, ದ್ರೋಣವಲ್ಲಿ ಹಾರಿಕ ಸೇರಿದಂತೆ ಇತರರು ಇದ್ದಾರೆ.

ವೇಟ್‌ಲಿಫ್ಟಿಂಗ್, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್ ಮತ್ತು ರಗ್ಬಿ ಸ್ಪರ್ಧೆಗಳಿಗೆ ಯಾವುದೇ ಪುರುಷ ಅಥ್ಲೀಟ್‌ಗಳ ಹೆಸರು ಪಟ್ಟಿಯಲ್ಲಿ ಇಲ್ಲ. ಕುರಾಶ್ ಸ್ಪರ್ಧೆಗೆ ಇಬ್ಬರನ್ನು, ವೇಟ್‌ಲಿಫ್ಟಿಂಗ್‌ಗೆ ಇಬ್ಬರು ಮಹಿಳೆಯರನ್ನು ಮತ್ತು ಒಬ್ಬ ಜಿಮ್ನಾಸ್ಟ್‌ ಮಾತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬಜರಂಗ್ ಅನಿಶ್ಚಿತ: ಕ್ರೀಡಾ ಸಚಿವಾಲಯವು ಒಲಿಂಪಿಯನ್‌ ಕುಸ್ತಿಪಟು ಬಜರಂಗ್ ಪುನಿಯಾ (65 ಕೆಜಿ) ಹೆಸರನ್ನು ಪಟ್ಟಿಯಲ್ಲಿ ಸೇರಿಸಿದೆ. ಅವರಿಗೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿ, ನೇರ ಅರ್ಹತೆಗೆ ಐಒಎ ಅಡ್‌ಹಾಕ್‌ ಸಮಿತಿ ಶಿಫಾರಸು ಮಾಡಿತ್ತು.

ಈ ಮಧ್ಯೆ ಬಜರಂಗ್‌, ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಬೆಂಬಲ ನೀಡಿದ ಎಲ್ಲಾ ಖಾಪ್ ಪಂಚಾಯತ್‌ಗಳು ಬಯಸಿದರೆ ಏಷ್ಯನ್ ಗೇಮ್ಸ್‌ನಿಂದ ದೂರ ಉಳಿಯುವ ಸೂಚನೆಯನ್ನು ನೀಡಿದ್ದಾರೆ.

ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ತಾನು ಅಗ್ರಸ್ಥಾನ ಪಡೆದಿದ್ದು, ತನ್ನ ಹೆಸರನ್ನು ಸೇರಿಸುವಂತೆ ವಿಶಾಲ್ ಕಾಲಿರಾಮನ್ ಸಚಿವಾಲಯವನ್ನು ಒತ್ತಾಯಿಸಿದ್ದರು.

ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಿಂದ ವಿನಾಯಿತಿ ಪಡೆದರೂ ಮೊಣಕಾಲಿನ ಗಾಯದಿಂದಾಗಿ ವಿನೇಶಾ ಪೋಗಟ್‌ ಹಿಂದೆ ಸರಿದಿದ್ದು, ಅಂತಿಮ್‌ ಪಂಘಲ್‌ ಅವರ ಹೆಸರನ್ನು ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT