ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಬಾಕ್ಸಿಂಗ್: ನಿಖತ್‌ ಜರೀನ್‌, ಲವ್ಲಿನಾ ಮೇಲೆ ಕಣ್ಣು

Published 23 ಸೆಪ್ಟೆಂಬರ್ 2023, 15:21 IST
Last Updated 23 ಸೆಪ್ಟೆಂಬರ್ 2023, 15:21 IST
ಅಕ್ಷರ ಗಾತ್ರ

ಹಾಂಗ್‌ಝೌ: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಕತ್ ಜರೀನ್ ಮತ್ತು ಒಲಿಂಪಿಕ್ ಪದಕ ಜಯಿಸಿರುವ ಲವ್ಲಿನಾ ಬೊರ್ಗೊಹೈನ್ ಅವರು ಏಷ್ಯನ್ ಗೇಮ್ಸ್‌ ಬಾಕ್ಸಿಂಗ್‌ನಲ್ಲಿ ಪದಕ ಜಯಿಸಿಕೊಡುವ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಭಾನುವಾರದಿಂದ ಬಾಕ್ಸಿಂಗ್ ಬೌಟ್‌ಗಳು ಆರಂಭವಾಗಲಿವೆ. ಈ ಬಾರಿ ಉತ್ತಮ ತಂಡವನ್ನು ಕಣಕ್ಕಿಳಿಸಲಾಗುತ್ತಿದೆ. ಪುರುಷರ ತಂಡದಲ್ಲಿ ಅನುಭವಿ ಶಿವ ಥಾಪಾ, ದೀಪಕ್ ಬೊರಿಯಾ ಮತ್ತು ನಿಶಾಂತ್ ದೇವ್ ಇದ್ದಾರೆ.

ಬಾಕ್ಸಿಂಗ್‌್ನಲ್ಲಿ 13 ತೂಕದ ವಿಭಾಗಗಳು ಇವೆ. ಒಟ್ಟು 34 ಒಲಿಂಪಿಕ್ ಅರ್ಹತಾ ಕೋಟಾಗಳು ಇವೆ.

ಮಹಿಳೆಯರ ವಿಭಾಗದ 50 ಕೆ.ಜಿ, 54ಕೆ.ಜಿ, 57 ಕೆ.ಜಿ ಹಾಗೂ 60 ಕೆ.ಜಿ ಸಮಿಫೈನಲ್ ಪ್ರವೇಶಿಸಿದವರು, 66 ಕೆ.ಜಿ 75 ಕೆ.ಜಿ ವಿಭಾಗಗಳಲ್ಲಿ ಫೈನಲ್ ಪ್ರವೇಶಿಸಿದವರು ಮುಂದಿನ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವರು.

ಪುರುಷರ ತೂಕದ ಏಳು ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿ ಜಯಿಸಿದವರು ಕೂಡ ಪ್ಯಾರಿಸ್ ಟಿಕೆಟ್ ಗಿಟ್ಟಿಸುವರು.

ಶಿವಾಗೆ ಸುಲಭ ಎದುರಾಳಿ

ಪುರುಷರ ವಿಭಾಗದಲ್ಲಿ  ಅನುಭವಿ ಶಿವ ಥಾಪಾ ಅವರಿಗೆ ಸುಲಭ ಎದುರಾಳಿ ದೊರೆತಿದ್ದಾರೆ. ಇದರಿಂದಾಗಿ ಅವರಿಗೆ ಇಲ್ಲಿ ಪದಕ ಗೆದ್ದು ಒಲಿಂಪಿಕ್ ಟಿಕೆಟ್ ಗಳಿಸುವ ಅವಕಾಶ ಹೆಚ್ಚಿದೆ. ಅವರು ಮೊದಲ ಸುತ್ತಿನಲ್ಲಿ ತೈಪೆಯ ಚು ಎನ್ ಲೈ ವಿರುದ್ಧ  ಸೆಮಿಫೈನಲ್‌ನಲ್ಲಿ ಸೆಣಸುವರು.

ಆದರೆ ಇನ್ನುಳಿದ ವಿಭಾಗಗಳಲ್ಲಿ ದೀಪಕ್, ಅಮಿತ್ ಪಂಘಲ್ ಹಾಗೂ ನಿಶಾಂತ್ ಅವರಿಗೆ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಶಿವ ಥಾಪಾ
ಶಿವ ಥಾಪಾ
ಜಸ್ಮೈನ್ ಲಂಬೊರಿಯಾ
ಜಸ್ಮೈನ್ ಲಂಬೊರಿಯಾ
ನಿಶಾಂತ್ ದೇವ್
ನಿಶಾಂತ್ ದೇವ್

Cut-off box - ನಿಖತ್‌ಗೆ ಕಠಿಣ ಹಾದಿ ಮಹಿಳೆಯರ ವಿಭಾಗದಲ್ಲಿ ಈ ಬಾರಿ ನಿಖತ್ (50 ಕೆ.ಜಿ) ಲವ್ಲಿನಾ (75 ಕೆ.ಜಿ) ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತರಾದ ಪರವೀನ್ ಹೂಡಾ (57 ಕೆ.ಜಿ) ಕಾಮನ್‌ವೆಲ್ತ್ ಗೇಮ್ಸ್ ಪದಕವಿಜೇತರಾದ ಜಸ್ಮೈನ್ ಲೆಂಬೊರಿಯಾ (60 ಕೆ.ಜಿ) ಹಾಗೂ ಪ್ರೀತಿ ಪವಾರ್ ಅವರು ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ. ಆದರೆ ನಿಖತ್ ಅವರಿಗೆ ಎರಡು ಬಾರಿಯ ಏಷ್ಯನ್ ಚಾಂಪಿಯನ್ ವಿಯೆಟ್ನಾಂ ದೇಶದ ಎನ್‌ಗುಯೆನ್ ಥಿ ಟಾಮ್ ಅವರು ಮೊದಲ ಹಣಾಹಣಿಯಲ್ಲಿ ಎದುರಾಗಲಿದ್ದಾರೆ. ಅವರಿಂದ ನಿಕತ್ ಅವರಿಗೆ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಒಂದೊಮ್ಮೆ ನಿಕತ್ ಸೆಮಿಫೈನಲ್ ಪ್ರವೇಶಿಸಿದರೂ ಥಾಯ್ಲೆಂಡ್‌ ದೇಶದ ಎರಡು ಬಾರಿ ವಿಶ್ವ ಕಂಚು ವಿಜೇತ ಬಾಕ್ಸರ್ ಚುಟಾಮ್ಯಾನ್ ರಕ್ಸತ್‌ ವಿರುದ್ಧ ಸೆಣಸುವರು. 69 ಕೆ.ಜಿ. ವಿಭಾಗದಿಂದ 75 ಕೆ.ಜಿಗೆ ಏರಿರುವ ಲವ್ಲಿನಾ ಅವರಿಗೆ ಏಷ್ಯನ್ ಮತ್ತು ವಿಶ್ವ ಬಾಕ್ಸಿಂಗ್ ಪದಕ ಜಯಿಸುವ ಗುರಿ ಇದೆ. ಅವರಿಗೆ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ. ಆದ್ದರಿಂದ ಎಂಟರ ಘಟ್ಟದಲ್ಲಿ ಅವರು ಕೊರಿಯಾದ ಸಿಯಾಂಗ್ ಸುಯೋನ್ ವಿರುದ್ಧ ಸೆಣಸುವರು. ಜಸ್ಮೈನ್ ಅವರಿಗೂ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ. ಅರುಂಧತಿ ಚೌಧರಿ 66 ಕೆ.ಜಿ. ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಆತಿಥೇಯ ಚೀನಾದ ಯಾಂಗ್ ಲಿ ವಿರುದ್ಧ; ಪ್ರೀತಿ ಪವಾರ್ ಜೋರ್ಡಾನ್‌ ದೇಶದ ಅಲಹಸಂತ್ ಸಿಲಿನಾ ವಿರುದ್ಧ; ಪರವೀನ್ ಅವರು ಚೀನಾ ಶು ಜೀಹುನ್ ವಿರುದ್ಧ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT