ಉಟ್ರೆಕ್ಟ್ (ನೆದರ್ಲೆಂಡ್ಸ್ ): ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ಜೂನಿಯರ್ ಮಹಿಳಾ ಹಾಕಿ ತಂಡವು ಯುರೋಪ್ ಪ್ರವಾಸದ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಮಣಿಯಿತು.

ಮಂಗಳವಾರ ನಡೆದ ನಿಗದಿತ ಅವಧಿಯಲ್ಲಿ ಪಂದ್ಯವು ಗೋಲುರಹಿತ ಡ್ರಾ ಆಗಿತ್ತು. ಬಳಿಕ ನಡೆದ ಶೂಟೌಟ್ನಲ್ಲಿ ನೆದರ್ಲೆಂಡ್ಸ್ 3–2 ಅಂತರದಿಂದ ಜಯ ಸಾಧಿಸಿತು.

ಶೂಟೌಟ್ನಲ್ಲಿ ಭಾರತದ ಲಾಲರಿನ್ಪುಯಿ ಹಾಗೂ ಪ್ರಿಯಾಂಕಾ ಯಾದವ್ ಚೆಂಡನ್ನು ಗುರಿ ಸೇರಿಸಿದರು. ಎದುರಾಳಿ ತಂಡದ ಇಮ್ಮೆ ಡಿ ಲ್ಯೂ, ರೂಸ್ ಆಲ್ಕಿಮೇಡ್ ಹಾಗೂ ಲಾಟ್ ರಸ್ಟ್ ಗೆಲುವಿನಲ್ಲಿ ಮಿಂಚಿದರು.

ಚಿಲಿಯಲ್ಲಿ ಈ ವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ ಎಫ್ಐಎಚ್ ಹಾಕಿ ಜೂನಿಯರ್ ಮಹಿಳಾ ವಿಶ್ವಕಪ್ಗೆ ಸಿದ್ಧತೆಯ ಭಾಗವಾಗಿ ಭಾರತವು ಈ ಪ್ರವಾಸ ಕೈಗೊಂಡಿತ್ತು. ಬೆಲ್ಜಿಯಂ ವಿರುದ್ಧ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ಭಾರತದ ವನಿತೆಯರು, ಆಸ್ಟ್ರೇಲಿಯಾಕ್ಕೂ ಸೋಲಿನ ರುಚಿ ತೋರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.