ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಇಂಗ್ಲೆಂಡ್‌ ಎದುರು ಸೋತ ಭಾರತ

Published 2 ಜೂನ್ 2024, 16:29 IST
Last Updated 2 ಜೂನ್ 2024, 16:29 IST
ಅಕ್ಷರ ಗಾತ್ರ

ಲಂಡನ್: ಭಾರತ ಪುರುಷರ ಹಾಕಿ ತಂಡ ಎಫ್ಐಎಚ್ ಪ್ರೊ ಲೀಗ್ ಹಾಕಿ ಲಂಡನ್ ಲೆಗ್‌ನ ಎರಡನೇ ಪಂದ್ಯದಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ 1-3 ಗೋಲುಗಳಿಂದ ಸೋತಿದೆ. ಶನಿವಾರ ವಿಶ್ವ ಚಾಂಪಿಯನ್ ಜರ್ಮನಿಯನ್ನು 3-0 ಗೋಲುಗಳಿಂದ ಮಣಿಸಿತ್ತು. 

ಇಂಗ್ಲೆಂಡ್ ಪರ ಬಂಡುರಾಕ್ ನಿಕೋಲಸ್ (2 ಮತ್ತು 11ನೇ ನಿಮಿಷ) ಗೋಲು ಗಳಿಸಿದರೆ, ಕ್ಯಾಲ್ನಾನ್ ವಿಲ್ 47ನೇ ನಿಮಿಷದಲ್ಲಿ  ಗೋಲು ಗಳಿಸಿದರು. ಭಾರತದ ಪರ 35ನೇ ನಿಮಿಷದಲ್ಲಿ ಅಭಿಷೇಕ್ ಏಕೈಕ ಗೋಲು ಗಳಿಸಿದರು. 

ಭಾರತಕ್ಕೆ ಎಂಟು ಪೆನಾಲ್ಟಿ ಕಾರ್ನರ್ ಅವಕಾಶ ದೊರೆಯಿತು. ಆದರೆ, ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಂಗ್ಲೆಂಡ್‌ಗೆ ಐದು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಅವುಗಳಲ್ಲಿ ಯಾವುದನ್ನೂ ಗೋಲಾಗಿ ಪರಿವರ್ತಿಸಲು ಅವರಿಗೂ ಆಗಲಿಲ್ಲ.

ಎಫ್ಐಎಚ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್‌ಗಿಂತ ಒಂದು ಸ್ಥಾನ ಮೇಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 8ರಂದು ಜರ್ಮನಿ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT