ಜಕಾರ್ತ, ಇಂಡೊನೇಷ್ಯಾ: ಅಮೋಘ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಒಟ್ಟು 72 ಪದಕಗಳನ್ನು ಬಗಲಿಗೆ ಹಾಕಿಕೊಂಡು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪಾರಮ್ಯ ಮೆರೆದರು. 15 ಚಿನ್ನ, 24 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು ಗಳಿಸಿದ ಭಾರತ ಕೂಟದಲ್ಲಿ ಈ ವರೆಗಿನ ಗರಿಷ್ಠ ಸಾಧನೆ ಮಾಡಿತು.

172 ಚಿನ್ನದೊಂದಿಗೆ 319 ಪದಕಗಳನ್ನು ಗಳಿಸಿದ ಚೀನಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದರೆ, ದಕ್ಷಿಣ ಕೊರಿಯಾ 53 ಚಿನ್ನದೊಂದಿಗೆ 125 ಪದಕ ಗೆದ್ದು ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು. ಮೂರನೇ ಸ್ಥಾನ ಗಳಿಸಿದ ಇರಾನ್ 51 ಚಿನ್ನ, 42 ಬೆಳ್ಳಿ ಮತ್ತು 43 ಕಂಚು ಗೆದ್ದಿತು. ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನ ಹೊಂದಿದೆ. ಕಳೆದ ಬಾರಿ ಭಾರತ 3 ಚಿನ್ನ, 14 ಬೆಳ್ಳಿ ಮತ್ತು 16 ಕಂಚು ಗಳಿಸಿತ್ತು.

ಕೊನೆಯ ದಿನವಾದ ಶನಿವಾರ ಎಸ್‌ಎಲ್3 ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮೋದ್ ಭಗತ್ ಚಿನ್ನ ಗೆದ್ದರು. ಇಂಡೊನೇಷ್ಯಾದ ಉಕುನ್ ರಕೇಂಡಿ ವಿರುದ್ಧ ಅವರು 21–19, 15–21, 21–14ರಿಂದ ಜಯ ಸಾಧಿಸಿದರು. ಎಸ್‌ಎಲ್4 ವಿಭಾಗದಲ್ಲಿ ತರುಣ್ 21–16, 21–6ರಿಂದ ಚೀನಾದ ಯುಯಾಂಗ್ ಗೋ ಎದುರು ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.