ಬ್ಯಾಂಕಾಕ್: ಭಾರತದ ರಿಕರ್ವ್ ಆರ್ಚರಿಪಟುಗಳ ತಂಡವು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾದರು. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳಾ ತಂಡವು ಕಂಚು ಗಳಿಸಿತು.

ಇಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್ ಆರ್ಚರಿಯ ಫೈನಲ್ ಪ್ರವೇಶಿಸಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಐದನೇ ಶ್ರೇಯಾಂಕದ ಭಾರತ ತಂಡದಲ್ಲಿ ಅಂಕಿತಾ ಭಕತ್, ಭಜನ್ ಕೌರ್ ಮತ್ತು ತಿಷಾ ಪೂನಿಯಾ ಅವರಿದ್ದ ತಂಡಕ್ಕೆ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಸವಾಲು ಮೀರಲಿಲ್ಲ.

ಮೊದಲ ಸೆಟ್‌ನಲ್ಲಿ ಭಾರತವು ಮುನ್ನಡೆ ಸಾಧಿಸಿತ್ತು. ಆದರೆ ನಂತರದ ಪೈಪೋಟಿಯಲ್ಲಿ 2–6 (55-54, 54-56, 55-57, 52-56) ರಲ್ಲಿ ಸೋತಿತು. ಕಂಚಿನ ಪದಕ ಸುತ್ತಿನಲ್ಲಿ ಭಾರತವು 5–1ರಿಂದ (55-53, 53-53, 52-51) ಚೈನಿಸ್ ತೈಪೆ ವಿರುದ್ಧ ಗೆದ್ದಿತು.

ಪುರುಷರ ವಿಭಾಗದಲ್ಲಿ ಎರಡನೇ ಶ್ರೇಯಾಂಕದ ಭಾರತ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿಯೇ ಮುಗ್ಗರಿಸಿತು. ಧೀರಜ್ ಬೊಮ್ಮದೇವರ, ತರುಣದೀಪ್ ರಾಯ್ ಮತ್ತು ಪ್ರವೀಣ ಜಾಧವ್ ತಂಡದಲ್ಲಿದ್ದರು.

ಆರಂಭದಲ್ಲಿ ತಂಡವು 2–0ಯಿಂದ ಕಜಕಸ್ತಾನ ವಿರುದ್ಧ ಮುನ್ನಡೆ ಸಾಧಿಸಿತ್ತು. ಆದರೆ, ನಂತರದ ಪೈಪೋಟಿಯಲ್ಲಿ ಒತ್ತಡ ನಿಭಾಯಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭಾರತ 4–5ರಿಂದ ಕಜಕಸ್ತಾನದ ಎದುರು ಮಣಿಯಿತು.

ಇದೇ ಮೊದಲ ಬಾರಿಗೆ ಈ ಕೂಟದಲ್ಲಿ ಒಲಿಂಪಿಕ್ ಕೋಟಾ ಪಡೆಯುವ ಅವಕಾಶ ನೀಡಲಾಗಿತ್ತು. ತಂಡ ವಿಭಾಗದಲ್ಲಿ ಕೋಟಾ ನಿಗದಿಯಾಗಿತ್ತು. ಶುಕ್ರವಾರ ಮತ್ತು ಶನಿವಾರ ವೈಯಕ್ತಿಕ ವಿಭಾಗಗಳ ಕೋಟಾ ಕೂಡ ನೀಡಲಾಗುವುದು.

ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ಮೂರನೇ ವಿಶ್ವಕಪ್ ಆರ್ಚರಿಯಲ್ಲಿ ಒಲಿಂಪಿಕ್ ಕೋಟಾಗಳು ಇವೆ.

ಕಂಪೌಂಡ್ ವಿಭಾಗದಲ್ಲಿ ಭಾರತದ ಆರ್ಚರಿಪಟುಗಳು ಒಂದು ಕಂಚು ಜಯಿಸಿದ್ದಾರೆ. ಇನ್ನೂ ನಾಲ್ಕು ಪದಕಗಳು ಒಲಿಯುವುದು ಖಚಿತವಾಗಿದೆ.

ಪ್ರೀಕ್ವಾರ್ಟರ್‌ನಲ್ಲಿ ವಿಶ್ವ ಚಾಂಪಿಯನ್ ಅದಿತಿ ಸ್ವಾಮಿ ಅವರು ಬೋನಾ ಅಖ್ತರ್ ವಿರುದ್ಧ ಆಘಾತ ಅನುಭವಿಸಿದರು.

ಅನುಭವಿಯಾಗಿರುವ ಜ್ಯೋತಿ ಸುರೇಖಾ ವೆನಂ ಮತ್ತು ಪರಣಿತ್ ಕೌರ್ ಕಂಪೌಂಡ್ ಮಹಿಳಾ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ ಭಾರತಕ್ಕೆ ಚಿನ್ನದ ಪದಕ ಜಯಿಸುವ ಅವಕಾಶವಿದೆ.

ಪರಣಿತ್ 147–145 ರಿಂದ ಕಜಕಸ್ತಾನದ ವಿಕ್ಟೋರಿಯಾ ಲಿಯಾನ್ ವಿರುದ್ಧ ಗೆದ್ದರು. ಜ್ಯೋತಿ 148–145ರಿಂದ ಚೈನಿಸ್ ತೈಪೆಯ ಹಾಂಗ್ ಈ ಜೌ ವಿರುದ್ಧ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.