ಲಿಮಾ (ಪೆರು): ಭಾರತ ತಂಡದ ಶೂಟಿಂಗ್ ಸ್ಪರ್ಧಿಗಳು, ಮಂಗಳವಾರ ಇಲ್ಲಿ ಆರಂಭವಾಗುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಸ್ಫೂರ್ತಿಯುತ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಕಳೆದ ವಾರ ಬ್ಯೂನೊ ಏರ್ಸ್ನಲ್ಲಿ ನಡೆದ ವರ್ಷದ ಮೊದಲ ರೈಫಲ್, ಪಿಸ್ತೂಲ್ ಮತ್ತು ಶಾಟ್ಗನ್ ವಿಶ್ವಕಪ್ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ಮಹಿಳೆಯರ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್, ಸುರುಚಿ ಮತ್ತು ಸೈನಿಯಮ್ ಸ್ಪರ್ಧಿಸಲಿದ್ದಾರೆ. ಲಾಸ್ ಪಾಮಾಸ್ ಶೂಟಿಂಗ್ ರೇಂಜ್ನಲ್ಲಿ ನಡೆಯುವ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಸೌರಭ್ ಚೌಧರಿ, ವರುಣ್ ತೋಮರ್ ಮತ್ತು ರವೀಂದರ್ ಅವರು ವಿಶ್ವಕಪ್ ಎರಡನೇ ಚಿನ್ನ ಪಡೆಯಲು ಉತ್ಸುಕರಾಗಿದ್ದಾರೆ.

ಪುರುಷ ಮತ್ತು ಮಹಿಳೆಯರ ವಿಭಾಗದ 10 ಮೀ.ಏರ್ ಪಿಸ್ತೂಲ್ ಫೈನಲ್ಸ್ ಮಂಗಳವಾರ ನಡೆಯಲಿದೆ.

ಕಳೆದ ವಾರ ಅರ್ಜೆಂಟಿನಾದಲ್ಲಿ ನಡೆದ ವಿಶ್ವಕಪ್ ಮೊದಲ ಲೆಗ್ನಲ್ಲಿ ಭಾರತ ನಾಲ್ಕು ಚಿನ್ನ ಸೇರಿ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.