ಪರ್ತ್: ಉಪನಾಯಕಿ ನವನೀತ್ ಕೌರ್ ಅವರ ಅಮೋಘ ಆಟದ ಬಲದಿಂದ ಭಾರತ ವನಿತೆಯರ ತಂಡವು ಹಾಕಿ ಸರಣಿಯ ಕೊನೆಯ ಪಂದ್ಯದಲ್ಲಿ 1–0ಯಿಂದ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಸಾಧಿಸಿತು.

ಮೂರು ಪಂದ್ಯಗಳ ಸರಣಿಯನ್ನು ಆತಿಥೇಯ ತಂಡವು 2–1ರಿಂದ ಗೆದ್ದುಕೊಂಡಿತು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡವು ಕ್ರಮವಾಗಿ 0–2 ಮತ್ತು 2–3 ಗೋಲುಗಳಿಂದ ಪರಾಭವಗೊಂಡಿತ್ತು.

ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅನುಭವಿ ಸ್ಟ್ರೇಕರ್ ನವನೀತ್ ಅವರು 21ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಿಸಿದರು. ಈ ಮೂಲಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಏಕೈಕ ಜಯವನ್ನು ಭಾರತ ತಂಡಕ್ಕೆ ತಂದುಕೊಟ್ಟರು. ಸರಣಿಗೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲೂ ಸಲೀಮಾ ಟೆಟೆ ಬಳಗ ಕ್ರಮವಾಗಿ 3–5 ಮತ್ತು 2–3ರಿಂದ ಆಸ್ಟ್ರೇಲಿಯಾ ಎ ತಂಡಕ್ಕೆ ಮಣಿದಿದ್ದರು.

ಮೊದಲ ಕ್ವಾರ್ಟರ್ನಲ್ಲಿ ಆಸ್ಟ್ರೇಲಿಯಾ ತಂಡವು ಪ್ರಾಬಲ್ಯ ಸಾಧಿಸಿ, ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆಯಿತು. ಅವೆರಡನ್ನೂ ವ್ಯರ್ಥವಾಗುವಂತೆ ಭಾರತದ ವನಿತೆಯರು ನೋಡಿಕೊಂಡರು. ಎರಡನೇ ಕ್ವಾರ್ಟರ್ ಆರಂಭವಾದ ಆರು ನಿಮಿಷಗಳಲ್ಲಿ ನವನೀತ್ ಅವರು ಅಮೋಘ ರೀತಿಯಲ್ಲಿ ಫೀಲ್ಡ್ ಗೋಲು ಮೂಲಕ ಭಾರತ ತಂಡಕ್ಕೆ ಮುನ್ನಡೆ ಒದಗಿಸಿದರು. ಶನಿವಾರ ನಡೆದಿದ್ದ ಎರಡನೇ ಪಂದ್ಯದಲ್ಲೂ ಅವರು ಒಂದು ಗೋಲು ಗಳಿಸಿದ್ದರು.

ದ್ವಿತೀಯಾರ್ಧದಲ್ಲೂ ಉಭಯ ತಂಡಗಳಿಂದ ತೀವ್ರ ಪೈಪೋಟಿ ನಡೆಯಿತು. ಸಮಬಲಕ್ಕೆ ಪ್ರಯತ್ನ ನಡೆಸುತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಕ್ವಾರ್ಟರ್ನಲ್ಲಿ ನಿರ್ಣಾಯಕ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಇದು ಭಾರತದ ಪಾಳಯದಲ್ಲಿ ಒಂದು ಕ್ಷಣ ಆತಂಕ ಮೂಡಿಸಿತ್ತು. ಆದರೆ, ಎದುರಾಳಿಯ ಗೋಲು ಅವಕಾಶವನ್ನು ಯಶಸ್ವಿಯಾಗಿ ತಡೆದು ಸಂಭ್ರಮಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.