ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಗೆ ಮಣಿದ ಭಾರತ ಮಹಿಳಾ ಜೂನಿಯರ್ ತಂಡ

Published 28 ಮೇ 2024, 0:10 IST
Last Updated 28 ಮೇ 2024, 0:10 IST
ಅಕ್ಷರ ಗಾತ್ರ

ಡೂಸೆಲ್‌ಡಾರ್ಫ್ (ಜರ್ಮನಿ): ಭಾರತ ಜೂನಿಯರ್ ಮಹಿಳಾ ತಂಡ, ಯುರೋಪ್ ಪ್ರವಾಸದ ತನ್ನ ಐದನೇ ಪಂದ್ಯದಲ್ಲಿ ಜರ್ಮನಿ ಎದುರು ಸೋಮವಾರ 4–6 ಗೋಲುಗಳಿಂದ ಸೋಲನುಭವಿಸಿತು.

ಆದರೆ, ಆರು ಗೋಲು ಬಿಟ್ಟುಕೊಟ್ಟರೂ, ಭಾರತ ಈ ಪಂದ್ಯದಲ್ಲಿ ನಾಲ್ಕು ಗೋಲುಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ವಿಶೇಷವಾಗಿ ವಿರಾಮದ ನಂತರ ಭಾರತ ಪ್ರತಿಹೋರಾಟ ಪ್ರದರ್ಶಿಸಿತು. ಭಾರತದ ಪರ ಸಂಜನಾ ಹೊರೊ (2 ಗೋಲು), ಭಿನಿಮಾ ದಾನ್ ಮತ್ತು ಕನಿಕಾ ಸಿವಾಚ್‌ ಗೋಲುಗಳನ್ನು ಗಳಿಸಿದರು.

ಭಾರತ ಆಟಗಾರ್ತಿಯರು ಮೇ 29ರಂದು ನೆದರ್ಲೆಂಡ್ಸ್‌ನ ಬ್ರೆಡಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡಚ್‌ ಕ್ಲಬ್ ತಂಡ ಆರೇಂಜ್‌ ರೂಡ್ ವಿರುದ್ಧ ಆಡಲಿದ್ದಾರೆ.

ಸೋಲು: ಇದೇ ತಂಡ ಯುರೋಪ್ ಪ್ರವಾಸದ ನಾಲ್ಕನೇ ಪಂದ್ಯದಲ್ಲೂ ಜರ್ಮನಿ ತಂಡಕ್ಕೆ 0–1 ಗೋಲಿನಿಂದ ಮಣಿದಿತ್ತು. ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಕೊನೆಯ 15 ನಿಮಿಷ ಉತ್ತಮ ಹೋರಾಟ ತೋರಿದರೂ ಯಶಸ್ಸು ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT