ಮಸ್ಕತ್: ಭಾರತದ ಭಾವನಾ ಜಾಟ್, ರವೀನಾ ಮತ್ತು ಮುನಿತಾ ಪ್ರಜಾಪತಿ ಅವರನ್ನೊಳಗೊಂಡ ಮಹಿಳಾ ತಂಡವು ವಿಶ್ವ ಅಥ್ಲೆಟಿಕ್ಸ್ ನಡಿಗೆ ಸ್ಪರ್ಧೆಯ 20 ಕಿಲೊ ಮೀಟರ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಶುಕ್ರವಾರ ಚಾರಿತ್ರಿಕ ಸಾಧನೆ ಮಾಡಿದೆ.
ವಿಶ್ವ ಚಾಂಪಿಯನ್‌ಷಿಪ್‌ನ ನಡಿಗೆ ಸ್ಪರ್ಧೆಯ ಮಹಿಳಾ ತಂಡ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದು. ಚೀನಾ ಮತ್ತು ಗ್ರೀಸ್ ತಂಡಗಳು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದವು.
ರವೀನಾ ಅವರು 20 ಕಿ.ಮೀ. ಸ್ಪರ್ಧೆಯನ್ನು ಒಂದು ತಾಸು 40 ನಿಮಿಷ 22 ಸೆಕೆಂಡುಗಳಲ್ಲಿ ಮುಗಿಸಿದರು. ಟೋಕಿಯೊ ಒಲಿಂಪಿಯನ್ ಭಾವನಾ ಜಾಟ್ 1 ತಾಸು 43 ನಿಮಿಷ 8 ಸೆ. ಮತ್ತು ಮುನಿತಾ 1 ತಾಸು 45 ನಿ. 3 ಸೆಕೆಂಡುಗಳಲ್ಲಿ ಗುರಿ ತಲುಪಿದರು.
ಒಂದು ದೇಶದ ಅಥ್ಲೀಟ್‌ಗಳಒಟ್ಟಾರೆ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ತಂಡದ ಪದಕಗಳನ್ನು ನಿರ್ಧರಿಸಲಾಗುತ್ತದೆ.
ಭಾರತ ಪುರುಷರ ತಂಡವು 2012ರಲ್ಲಿ ಕಂಚು ಗೆದ್ದಿತ್ತು.
ಅಮಿತ್ ಅನರ್ಹ: 20 ವರ್ಷದೊಳಗಿನ ಪುರುಷರ 10 ಕಿ.ಮೀ. ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮಿತ್ ಖತ್ರಿ ಅವರು ನಾಲ್ಕನೇ ಬಾರಿ ಕೆಂಪು ಕಾರ್ಡ್ ಪಡೆದ ಕಾರಣ ಅನರ್ಹಗೊಳಿಸಲಾಯಿತು.