ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಬಿಂದ್ಯಾರಾಣಿ ಬೆಳ್ಳಿ ಬೆಡಗು

55 ಕೆಜಿ ವಿಭಾಗದಲ್ಲಿ ಸಾಧನೆ
Published 6 ಮೇ 2023, 11:00 IST
Last Updated 6 ಮೇ 2023, 11:00 IST
ಅಕ್ಷರ ಗಾತ್ರ

ಜಿಂಜು, ಕೊರಿಯಾ: ಭಾರತದ ಬಿಂದ್ಯಾರಾಣಿ ದೇವಿ ಅವರು ಏಷ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಇಲ್ಲಿ ನಡೆಯುತ್ತಿರುವ ಕೂಟದಲ್ಲಿ ಮಹಿಳೆಯರ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬಿಂದ್ಯಾರಾಣಿ ಶನಿವಾರ, ಒಟ್ಟು 194 ಕೆಜಿ (ಸ್ನ್ಯಾಚ್‌ 83 ಕೆಜಿ+ ಕ್ಲೀನ್ ಮತ್ತು ಜರ್ಕ್‌ 111 ಕೆಜಿ) ಭಾರ ಎತ್ತಿದರು. ಈ ಆವೃತ್ತಿಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ಕ್ಲೀನ್ ಮತ್ತು ಜರ್ಕ್‌ ವಿಭಾಗದಲ್ಲೂ ಬಿಂದ್ಯಾರಾಣಿ ಬೆಳ್ಳಿ ಜಯಿಸಿದರು. ಅದಾಗ್ಯೂ 55 ಕೆಜಿ ತೂಕ ವಿಭಾಗಕ್ಕೆ ಒಲಿಂಪಿಕ್ಸ್‌ನಲ್ಲಿ ಅವಕಾಶ ಇಲ್ಲ.

ಮಣಿಪುರದ ಬಿಂದ್ಯಾ, ತಲಾ ಒಂದು ಸ್ನ್ಯಾಚ್‌ ಮತ್ತು ಕ್ಲೀನ್‌– ಜರ್ಕ್‌ ಪ್ರಯತ್ನಗಳನ್ನು ಕೈಚೆಲ್ಲಿದರು. ಚೀನಾ ತೈಪೆಯ ಚೆನ್‌ ಗುವನ್‌ ಲಿಂಗ್‌ (204 ಕೆಜಿ: 90+114) ಚಿನ್ನದ ಪದಕ ಜಯಿಸಿದರೆ, ವಿಯೆಟ್ನಾಂನ ವೊ ಥಿ ಕ್ಯುನ್‌ ನು (192 ಕೆಜಿ: 88+104) ಕಂಚು ಗಳಿಸಿದರು.

55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಲಿಫ್ಟರ್‌ಗಳು, 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಬೇಕೆಂದರೆ ತಮ್ಮ ತೂಕ ವಿಭಾಗವನ್ನು ಹೆಚ್ಚು ಅಥವಾ ಕಡಿಮೆಗೆ ಬದಲಾಯಿಸಿಕೊಳ್ಳಬೇಕಾಗಿದೆ.

2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಬಿಂದ್ಯಾರಾಣಿ ಬೆಳ್ಳಿ ಪದಕ ಜಯಿಸಿದ್ದರು.

2024ರ ಒಲಿಂಪಿಕ್‌ ಅರ್ಹತಾ ನಿಯಮಗಳ ಪ್ರಕಾರ, ಲಿಫ್ಟರ್‌ಗಳು 2023ರ ವಿಶ್ವ ಚಾಂಪಿಯನ್‌ಷಿಪ್‌ ಮತ್ತು 2024ರ ವಿಶ್ವಕಪ್ ಟೂರ್ನಿಗಳಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕು. ಅಲ್ಲದೆ ಹೆಚ್ಚುವರಿಯಾಗಿ, 2022ರ ವಿಶ್ವ ಚಾಂಪಿಯನ್‌ಷಿಪ್‌, 2023ರ ಕಾಂಟಿನೆಂಟಲ್ ಚಾಂಪಿಯನ್‌ಷಿಪ್ಸ್, 2023ರ ಗ್ರ್ಯಾನ್‌ಪ್ರಿ 1 ಮತ್ತು ಗ್ರ್ಯಾನ್‌ ಪ್ರಿ 2 ಮತ್ತು 2024ರ ಕಾಂಟಿನೆಂಟಲ್‌ ಚಾಂಪಿಯನ್‌ಷಿಪ್‌ಗಳ ಪೈಕಿ ಕನಿಷ್ಠ ಮೂರರಲ್ಲಿ ಪಾಲ್ಗೊಂಡಿರಬೇಕು.

ಈ ಚಾಂಪಿಯನ್‌ಷಿಪ್‌ ಮತ್ತು ಕಳೆದ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿರುವ ಬಿಂದ್ಯಾರಾಣಿ ಮತ್ತು ಮೀರಾಬಾಯಿ ಚಾನು, ಇನ್ನು ಎರಡು ಕಡ್ಡಾಯ ಟೂರ್ನಿಗಳಲ್ಲಿ ಮತ್ತು ಹೆಚ್ಚುವರಿ ಟೂರ್ನಿಯೊಂದರಲ್ಲಿ ಸ್ಪರ್ಧಿಸಬೇಕಿದೆ.

ಬಿಂದ್ಯಾರಾಣಿ ದೇವಿ
ಬಿಂದ್ಯಾರಾಣಿ ದೇವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT