ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಪುರ ಓಪನ್‌: ಶ್ರೀಕಾಂತ್‌, ಪ್ರಿಯಾಂಶು ಪರಾಭವ

ಭಾರತದ ಸವಾಲು ಅಂತ್ಯ
Published 8 ಜೂನ್ 2023, 13:39 IST
Last Updated 8 ಜೂನ್ 2023, 13:39 IST
ಅಕ್ಷರ ಗಾತ್ರ

ಸಿಂಗಪುರ: ಕಿದಂಬಿ ಶ್ರೀಕಾಂತ್‌ ಮತ್ತು ಪ್ರಿಯಾಂಶು ರಾಜಾವತ್‌ ಅವರು ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೋಲು ಅನುಭವಿಸಿದ್ದು, ಭಾರತದ ಸವಾಲಿಗೆ ತೆರೆಬಿದ್ದಿದೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌ 15–21, 19–21 ರಲ್ಲಿ ಚೀನಾ ತೈಪೆಯ ಚಿಯಾ ಹಾವೊ ಲೀ ಎದುರು ಪರಾಭವಗೊಂಡರು. ಇವರಿಬ್ಬರು ಇದೇ ಮೊದಲ ಬಾರಿ ಎದುರಾಗಿದ್ದರು. ಭಾರತದ ಆಟಗಾರ 37 ನಿಮಿಷಗಳಲ್ಲಿ ಸೋಲೊಪ್ಪಿದರು.

ಯುವ ಪ್ರತಿಭೆ ಪ್ರಿಯಾಂಶು ಅವರು 17–21, 16–21 ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಜಪಾನ್‌ನ ಕೊಡೈ ನರವೋಕಾ ಎದುರು ಮಣಿದರು. ಪ್ರಿಯಾಂಶು ಅವರು ಮೊದಲ ಸುತ್ತಿನಲ್ಲಿ ವಿಶ್ವದ 15ನೇ ರ್‍ಯಾಂಕ್‌ನ ಆಟಗಾರ ಕಾಂತ ಸುನೆಯಮ ಅವರಿಗೆ ಆಘಾತ ನೀಡಿದ್ದರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಎಂ.ಆರ್‌.ಅರ್ಜುನ್‌ ಮತ್ತು ಧ್ರುವ್‌ ಕಪಿಲಾ ಅವರು 15–21, 19–21 ರಲ್ಲಿ ಇಂಗ್ಲೆಂಡ್‌ನ ಬೆನ್‌ ಲೇನ್‌– ಸೀನ್‌ ವೆಂಡಿ ಎದುರು ಸೋತರು. 41 ನಿಮಿಷಗಳ ಹಣಾಹಣಿಯಲ್ಲಿ ಭಾರತದ ಜೋಡಿ ಎರಡನೇ ಗೇಮ್‌ನಲ್ಲಿ ಎದುರಾಳಿಗಳಿಗೆ ಸಾಕಷ್ಟು ಪೈಪೋಟಿ ಒಡ್ಡಿತು.

ಭಾರತದ ಪಿ.ವಿ.ಸಿಂಧು, ಸೈನಾ ನೆಹ್ವಾಲ್‌ ಮತ್ತು ಲಕ್ಷ್ಯ ಸೇನ್‌ ಅವರು ಮೊದಲ ಸುತ್ತಿನಲ್ಲೇ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT