ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಬಲ್ ಟೆನಿಸ್: ಭಾರತ ಪ್ರಾಬಲ್ಯ

ಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌
Last Updated 22 ಜುಲೈ 2019, 18:44 IST
ಅಕ್ಷರ ಗಾತ್ರ

ಕಟಕ್‌ (ಪಿಟಿಐ): ಆತಿಥೇಯ ಭಾರತ 21ನೇಕಾಮನ್‌ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ನಲ್ಲಿ ಪ್ರಾಬಲ್ಯ ಮೆರೆದಿದೆ. ಒಟ್ಟು ಏಳು ಚಿನ್ನ, ಐದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡು ಬೀಗಿತು.

ಸೋಮವಾರ ಹರ್ಮಿತ್‌ ದೇಸಾಯಿ ಮತ್ತು ಐಹಿಕಾ ಮುಖರ್ಜಿ ಅವರು ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಫೈನಲ್‌ ಪಂದ್ಯದಲ್ಲಿ ಹರ್ಮಿತ್‌ ಅವರು ಭಾರತದವರೇ ಆದ ಜಿ.ಸತ್ಯನ್‌ ಅವರಿಗೆ 4–3 ಅಂತರದ ಸೋಲುಣಿಸಿದರು. ಏಳು ಗೇಮ್‌ಗಳ ಸ್ಪರ್ಧೆಯಲ್ಲಿ ಕಠಿಣ ಹೋರಾಟ ಕಂಡುಬಂತು. ಆರಂಭದ ಹಿನ್ನಡೆಯನ್ನು ಮೀರಿದ ಹರ್ಮಿತ್‌ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ದಿನದ ಆರಂಭದಲ್ಲಿ ನಡೆದಪುರುಷರ ಡಬಲ್ಸ್‌ ಫೈನಲ್‌ ನಲ್ಲಿ ಅಂಥೋಣಿ ಅಮಲ್‌ರಾಜ್‌ ಹಾಗೂ ಮಾನವ್‌ ಠಕ್ಕರ್‌ ಜೋಡಿ ಗೆಲುವು ಪಡೆಯಿತು. ಅಂತಿಮ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಸತ್ಯನ್‌ ಹಾಗೂ ಶರತ್‌ ಕಮಲ್‌ ವಿರುದ್ಧ 3–1 ಅಂತರದಿಂದ ವಿಜಯಿಯಾಯಿತು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಐಹಿಕಾ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನ ಜಯಿಸಿದರು. ಈ ಹಿಂದೆ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಮಧುರಿಕಾ ಪಾಟ್ಕರ್‌ ಅವರನ್ನು 4–0ಯಿಂದ ಐಹಿಕಾ ಸೋಲಿಸಿದರು.

ಪೂಜಾ ಸಹಸ್ರಬುಧೆ ಹಾಗೂ ಕೃತ್ವಿಕಾ ಸಿನ್ಹಾ ರಾಯ್‌ ಜೋಡಿಯು ಮಹಿಳಾ ಡಬಲ್ಸ್ ಫೈನಲ್‌ ಪಂದ್ಯದಲ್ಲಿ ಶ್ರೀಜಾ ಅಕುಲಾ ಹಾಗೂ ಮೌಸುಮಿ ಪಾಲ್‌ ಅವರನ್ನು 3–1ರಿಂದ ಮಣಿಸಿ ಪ್ರಶಸ್ತಿ ಎತ್ತಿಹಿಡಿಯಿತು.

ಎಲ್ಲ ವಿಭಾಗದ ಫೈನಲ್‌ ಪಂದ್ಯಗಳಲ್ಲಿ ಭಾರತದವರೇ ಕಾಣಿಸಿಕೊಂಡಿದ್ದು ವಿಶೇಷ. ಚಾಂಪಿಯನ್‌ಷಿಪ್‌ನಲ್ಲಿಇಂಗ್ಲೆಂಡ್‌ (ಎರಡು ಬೆಳ್ಳಿ, ಮೂರು ಕಂಚು) ಎರಡನೇ ಸ್ಥಾನ ಮತ್ತು ಸಿಂಗಪುರ (ಆರು ಕಂಚು) ಮೂರನೇ ಸ್ಥಾನ ಪಡೆದವು. ಮಲೇಷ್ಯಾ ಹಾಗೂ ನೈಜೀರಿಯಾ ತಲಾ ಒಂದು ಕಂಚಿನ ಪದಕ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT