ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ ಮೇಲೆ ಸಂಸ್ಥೆಯ ಉಪಾಧ್ಯಕ್ಷರೇ ಮಾಡಿರುವ ಆರೋಪವನ್ನುಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಶುಕ್ರವಾರ ಅಲ್ಲಗಳೆದಿದ್ದು ಚುನಾವಣೆ ಸಂದರ್ಭದಲ್ಲಿ ಬಾತ್ರಾ ಯಾವುದೇ ಅಕ್ರಮ ಎಸಗಲಿಲ್ಲ ಎಂದು ತೀರ್ಪು ನೀಡಿದೆ.

2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಐಒಎ ಉಪಾಧ್ಯಕ್ಷ ಸುಧಾಂಶು ಮಿತ್ತಲ್ ದೂರಿದ್ದರು. ಈ ಕುರಿತು ಐಒಸಿ ನೀತಿ ಆಯುಕ್ತರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು. ಆದರೆ ಈ ದೂರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಐಒಸಿ, ಪ್ರಕರಣವನ್ನು ಇಲ್ಲಿಗೇ ಮುಗಿಸಲಾಗಿದೆ ಎಂದು ಹೇಳಿದೆ.

‘ಸಂಸ್ಥೆಯ ಆಂತರಿಕ ಕಲಹದ ಹಿನ್ನೆಲೆಯಲ್ಲಿ ನೀವು ಸಲ್ಲಿಸಿದ ದೂರನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿ ಹಸ್ತಕ್ಷೇಪ ಮಾಡದೇ ಇರಲು ನಿರ್ಧರಿಸಲಾಗಿದೆ’ ಎಂದುಈ ಕುರಿತು ಮಿತ್ತಲ್ ಅವರಿಗೆ ಬರೆದ ಪತ್ರದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನೀತಿ ಆಯುಕ್ತ ಪಕಿರೆಟಿ ಜಪ್ಪೆಲಿ ತಿಳಿಸಿದ್ದಾರೆ.

ಬಾತ್ರಾ ಮೋಸಗಾರನೂ ಸುಳ್ಳುಗಾರನೂ ತಪ್ಪೆಸಗಿದವನೂ ಆಗಿದ್ದಾನೆ ಎಂದುಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರಿಗೆ ಬರೆದಿರುವ ಪತ್ರದಲ್ಲಿ ಮಿತ್ತಲ್ ದೂರಿದ್ದರು. ಇದೇ ಬಗೆಯ ಆರೋಪಗಳನ್ನು ಹೊರಿಸಿಅಂತರರಾಷ್ಟ್ರೀಯ ಹಾಕಿ ಫೆಡರೇಷನ್ಗೂ ದೂರು ಸಲ್ಲಿಸಿದರು. ಭಾರತ ಹಾಕಿ ಫೆಡರೇಷನ್ ಅಧ್ಯಕ್ಷರಾಗಿದ್ದಾಗಲೇ 2016ರಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಬಾತ್ರಾ ಅಧ್ಯಕ್ಷರಾಗಿದ್ದರು ಎಂದು ಆರೋಪಿಸಿದ್ದರು. ಆದರೆಬಾತ್ರಾ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹಾಕಿ ಫೆಡರೇಷನ್ ಹೇಳಿತ್ತು.

ಬಾತ್ರಾಗೆಮತ್ತೊಬ್ಬಉಪಾಧ್ಯಕ್ಷರ ಬೆಂಬಲ
ಬಾತ್ರಾ ಮೇಲೆ ಮಿತ್ತಲ್ ಮಾಡಿರುವ ಆರೋಪಗಳಿಗೆ ಮತ್ತೊಬ್ಬ ಉಪಾಧ್ಯಕ್ಷ ಆದಿಲೆ ಸುಮರಿವಾಲ ಆಕ್ಷೇಪ ವ್ಯಕ್ತಪಡಿಸಿದ್ದರು. ಮಿತ್ತಲ್ ಆಧಾರರಹಿತ ಆರೋಪಗಳನ್ನು ಮಾಡಿದ್ದು ಪ್ರಾಮಾಣಿಕನೂ ಕಠಿಣ ಪರಿಶ್ರಮಪಡುವ ವ್ಯಕ್ತಿಯೂ ಆಗಿರುವ ಬಾತ್ರಾಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ನಡೆಸಿರುವ ಪ್ರಯತ್ನ ಬೇಸರ ತಂದಿದೆ. ಮಿತ್ತಲ್ ಐಒಎಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಆರೋಪಗಳನ್ನು ಮಾಡಿದ್ದಾರೆ’ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದರು. ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಅವರು ತಮಗೆ ಬಂದಿರುವ ಪತ್ರಗಳ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.