ಮೈಸೂರು: ಭಾರತದ ಪ್ರಿಯಾಂಶಿ ಭಂಡಾರಿ ಇಲ್ಲಿ ಭಾನುವಾರ ಆರಂಭವಾದ ಐಟಿಎಫ್– ಮಹಿಳೆಯರ ವಿಶ್ವ ಟೆನಿಸ್ ಟೂರ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆದ ಸಿರಿ ಪಾಟೀಲ ವಿರುದ್ಧ ಜಯ ಗಳಿಸಿದರು.

ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ)ನಲ್ಲಿ ನಡೆದ ಪಂದ್ಯದಲ್ಲಿ ಪ್ರಿಯಾಂಶಿ ಅವರು 6–4, 7–5ರಲ್ಲಿ ಜಯ ಗಳಿಸಿದರು. ಆಕರ್ಷಕ ಸರ್ವ್‌ಗಳಿಂದ ಎದುರಾಳಿಯನ್ನು ಕಾಡಿದ ಪ್ರಿಯಾಂಶಿ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದರು. 2ನೇ ಸೆಟ್‌ನಲ್ಲಿ ಸಮಬಲದ ಹೋರಾಟ ನಡೆಸಿ ಅಂತಿಮವಾಗಿ ಮೇಲುಗೈ ಸಾಧಿಸಿದರು.

ಸೀನಿಯರ್ ವಿಭಾಗದ ಟೂರ್ನಿಯಲ್ಲಿ ವೈಲ್ಡ್‌ಕಾರ್ಡ್ ಪ್ರವೇಶ ಪಡೆದ ಮಂಡ್ಯದ 15 ವರ್ಷದ ಆಟಗಾರ್ತಿ ಕಾಶ್ವಿ ಸುನಿಲ್, ಮೊದಲ ಪಂದ್ಯದಲ್ಲಿಯೇ ಟೂರ್ನಿಯ 14ನೇ ಶ್ರೇಯಾಂಕಿತೆ ಜೋಯೆಲ್ ನಿಕೊಲ್ ವಿರುದ್ಧ 6-3, 7-6ರಿಂದ ಜಯಿಸಿದರು.

ಫಲಿತಾಂಶ: ಅರ್ಹತಾ ಸುತ್ತು: ಶ್ರೀನಿಧಿ ಬಾಲಾಜಿ 6–3, 6-3ರಿಂದ ಮೈಲ್ ಸಿಬುಲ್‌ಸ್ಕಿಟೆ ಎದುರು, ಈಶ್ವರಿ ಮಾಟೆರೆ 6-2, 6-1ರಿಂದ ಪ್ರಿಯಾಂಕಾ ರೋಡ್ರಿಕ್ಸ್ ಎದುರು, ಜಪಾನ್‌ನ ಕೈಲಿ ಡೆಮಿತ್ಸೊ 6–2, 6–1ರಿಂದ ಅಮೆರಿಕದ ಪ್ರಿಶಾ ವ್ಯಾಸ್ ಎದುರು, ಅಭಯ ವೆಮುರಿ 6–4, 6–3ರಿಂದ ಸೌಮ್ಯಾ ರೊಂಡೆ ಎದುರು, ಅದಿತಿ ರಾವತ್ 6–2, 6–3ರಿಂದ ನಿಧಿತ್ರಾ ರಾಜ್‌ಮೋಹನ್, ಚೆವಿಕಾ ರೆಡ್ಡಿ ಸಮಾ 4–6, 6–4, 10–3ರಿಂದ ಲಕ್ಷ್ಮಿ ಗೌಡ ಎದುರು ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.