ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀ ಕ್ವಾರ್ಟರ್‌ಗೆ ಜಯರಾಮ್‌, ರಿತುಪರ್ಣಾ

ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ; ಶಿವಂ ಶರ್ಮಾ, ಪೂರ್ವಿಶಾ ಜೋಡಿಗೆ ಸೋಲು
Last Updated 8 ಆಗಸ್ಟ್ 2018, 18:45 IST
ಅಕ್ಷರ ಗಾತ್ರ

ಹೊ ಚಿ ಮಿನ್‌ ಸಿಟಿ (ಪಿಟಿಐ): ಭಾರತದ ಅಜಯ್‌ ಜಯರಾಮ್‌ ಹಾಗೂ ರಿತುಪರ್ಣಾ ದಾಸ್‌ ಅವರು ಇಲ್ಲಿ ನಡೆಯುತ್ತಿರುವ ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಹಂತ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಅಜಯ್‌ ಅವರು 21–7, 21–16ರಿಂದ ಇಂಡೊನೇಷ್ಯಾದ ಗಜ್ರಾ ಪಿಲಿಯಂಗ್‌ ಅವರನ್ನು ಮಣಿಸಿದರು. ಪ್ರೀ ಕ್ವಾರ್ಟರ್‌ ಹಂತದಲ್ಲಿ ಅವರು ಬ್ರೆಜಿಲ್‌ನ ಗೋರ್‌ ಕೊಯೆಲ್ಹೊ ಎದುರು ಆಡಲಿದ್ದಾರೆ.

ಪಂದ್ಯದ ಆರಂಭದಿಂದಲೂ ಎದುರಾಳಿಯನ್ನು ಕಟ್ಟಿಹಾಕಿದ ಅಜಯ್‌, ಉತ್ತಮ ಸರ್ವ್‌ ಹಾಗೂ ಚುರುಕಾದ ಸ್ಮ್ಯಾಷ್‌ಗಳ ಮೂಲಕ ಗಮನಸೆಳೆದರು. ಇತ್ತೀಚೆಗೆ ನಡೆದಿದ್ದ ವೈಟ್‌ ನೈಟ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಆಟಗಾರ ರನ್ನರ್‌ ಅಪ್‌ ಆಗಿದ್ದರು.

ಮತ್ತೊಂದು ಪಂದ್ಯದಲ್ಲಿ ಮಿಥುನ್‌ ಮಂಜುನಾಥ್‌ ಅವರು 11–21, 21–14, 21–15ರಿಂದ ಜಪಾನ್‌ನ ರ‍್ಯೊಟಾರೊ ಮರುವೊ ವಿರುದ್ಧ ಜಯಿಸಿದರು.

ಗೋರ್‌, 22–20, 17–21, 21–17ರಿಂದ ಭಾರತದ ಸಿರಿಲ್‌ ವರ್ಮಾ ಎದುರು ಗೆದ್ದು ಹದಿನಾರರ ಘಟ್ಟ ತಲುಪಿದ್ದಾರೆ. ಈ ಹಣಾಹಣಿಯಲ್ಲಿ ಉಭಯ ಆಟಗಾರರು ತೀವ್ರ ಪೈಪೋಟಿ ನಡೆಸಿದರು. ಆದರೆ, ಕೊನೆಯಲ್ಲಿ ಎದುರಾಳಿಯ ತಂತ್ರಗಳಿಗೆ ಪ್ರತಿತಂತ್ರ ಹೆಣೆಯಲು ಸಿರಿಲ್ವಿಫಲವಾದರು.ಈ ಆಟಗಾರ, ತಮ್ಮ ಮೊದಲ ಪಂದ್ಯದಲ್ಲಿ 21–17, 21–16ರಿಂದ ಶ್ರೇಯಾಂಶ್‌ ಜೈಸ್ವಾಲ್‌ ಅವರನ್ನು ಸೋಲಿಸಿದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ರಿತುಪರ್ಣಾ, 21–13, 21–14ರಿಂದ ಜಪಾನ್‌ನ ಶಿಯೊರಿ ಶೈಟೊ ಅವರನ್ನು ಪರಾಭವಗೊಳಿಸಿದರು.

ಇನ್ನೊಂದು ಪಂದ್ಯದಲ್ಲಿ ರಸಿಕಾ ರಾಜೆ, 16–21, 13–21ರಿಂದ ಮಲೇಷ್ಯಾದ ಯೆನ್‌ ಮೀ ಹೊ ವಿರುದ್ಧ ಮಣಿದರು. ಚೀನಾದ ಏಳನೇ ಶ್ರೇಯಾಂಕಿತ ಆಟಗಾರ್ತಿ ಹನ್‌ ಯುಯಿ, 21–14, 21–13ರಿಂದ ಮುಗ್ಧಾ ಅಗ್ರೆ ಅವರನ್ನು ಸೋಲಿಸಿದರು. ವೈದೇಹಿ, 14–21, 12–21ರಿಂದ ಅಮೆರಿಕದ ಕ್ರಿಸ್ಟಲ್‌ ಪ್ಯಾನ್‌ ಎದುರು ಸೋತರು.

ಮಿಶ್ರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಜಪಾನ್‌ನ ತದಯುಕಿ ಉರೈ ಹಾಗೂ ರೇನಾ ಮಿಯೌರಾ ಜೋಡಿಯು 21–15, 21–16ರಿಂದ ಆರನೇ ಶ್ರೇಯಾಂಕಿತ ಶಿವಂ ಶರ್ಮಾ ಹಾಗೂ ಎಸ್‌. ಪೂರ್ವಿಶಾ ರಾಮ್‌ ಜೋಡಿಯನ್ನು ಸೋಲಿಸಿತು.

ಚೀನಾದ ಜಿಯಾಂಗ್‌ ಜೆನ್‌ಬಾಂಗ್‌ ಹಾಗೂ ಚೆನ್‌ ಯಿಂಗ್ಸುಯಿ ಜೋಡಿಯು 21–17, 18–21, 23–21ರಿಂದ ಧೃವ್‌ ಕಪಿಲಾ ಹಾಗೂ ಮೇಘನಾ ಜಕ್ಕಂಪುಡಿ ಜೋಡಿಯನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT