ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಜೋಷ್ನಾ ಚಾಂಪಿಯನ್‌

ಘೋಷಾಲ್‌ಗೆ ಪ್ರಶಸ್ತಿ ಗರಿ
Last Updated 15 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚೆನ್ನೈ: ಜೋಷ್ನಾ ಚಿಣ್ಣಪ್ಪ ಹಾಗೂ ಸೌರವ್‌ ಘೋಷಾಲ್‌ ಅವರು ರಾಷ್ಟ್ರೀಯ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಇಲ್ಲಿನ ಐಎಸ್‌ಎ ಅಂಗಣದಲ್ಲಿ ನಡೆದ ಹಣಾಹಣಿಗಳಲ್ಲಿ ಜೋಷ್ನಾ ಅವರಿಗೆ 18ನೇ ಪ್ರಶಸ್ತಿ ಒಲಿದರೆ, ಸೌರವ್‌ 13ನೇ ಬಾರಿ ರಾಷ್ಟ್ರೀಯ ಕಿರೀಟ ಧರಿಸಿದರು.

ಎರಡು ದಶಕಗಳಿಂದ ಸ್ಕ್ವಾಷ್‌ನಲ್ಲಿ ಪಾರಮ್ಯ ಮೆರೆಯುತ್ತಿರುವ ಜೋಷ್ನಾ, ಶನಿವಾರ ಫೈನಲ್‌ ಪಂದ್ಯದಲ್ಲಿ 8–11, 11–6, 11–4, 11–7ರಿಂದ ತನ್ವಿ ಖನ್ನಾ ಎದುರು ಗೆದ್ದು ಬೀಗಿದರು. ಮೊದಲ ಗೇಮ್‌ ಸೋತರೂ ಛಲಬಿಡದ ಅಗ್ರಶ್ರೇಯಾಂಕದ ಜೋಷ್ನಾ, ಆಟದ ತಂತ್ರಗಳನ್ನು ಬದಲಿಸಿಕೊಂಡು ಜಯ ಕಂಡುಕೊಂಡರು.

2000ರಲ್ಲಿ ಮೊದಲ ಬಾರಿಗೆ ಜೋಷ್ನಾ ಅವರು ರಾಷ್ಟ್ರೀಯ ಪ್ರಶಸ್ತಿಗೆ ಮುತ್ತಿಕ್ಕಿದ್ದರು. ಪುರುಷರ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಸೌರವ್‌ 11–6, 11–5, 11–6ರಿಂದ ಎರಡನೇ ಶ್ರೇಯಾಂಕದ, ಯುವಆಟಗಾರ ಅಭಿಷೇಕ್‌ ಪ್ರಧಾನ್‌ ಅವರನ್ನು ಮಣಿಸಿದರು. ಅಗ್ರ ಶ್ರೇಯಾಂಕದ ಸೌರವ್‌ ಅವರಿಗೆ ಅಭಿಷೇಕ್‌ ಸಾಟಿಯಾಗಲೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT