ಢಾಕಾ (ಪಿಟಿಐ): ಭಾರತದ ಮೈಸ್ನಾಮ್ ಮೆಯಿರಾಬಾ ಲುವಾಂಗ್ ಅವರು ಬಾಂಗ್ಲಾದೇಶ ಜೂನಿಯರ್ ಇಂಟರ್ನ್ಯಾಷನಲ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಮಣಿಪುರದ ಮೆಯಿರಾಬಾ 21–14, 21–18 ನೇರ ಗೇಮ್ಗಳಿಂದ ಮಲೇಷ್ಯಾದ ಕೆನ್ ಯೊಂಗ್ ಒಂಗ್ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 38 ನಿಮಿಷ ನಡೆಯಿತು.

ಇದಕ್ಕೂ ಮೊದಲು ನಡೆದಿದ್ದಸೆಮಿಫೈನಲ್ನಲ್ಲಿ ಮೆಯಿರಾಬಾ ಅವರು ಮಲೇಷ್ಯಾದ ಮತ್ತೊಬ್ಬ ಅಟಗಾರ ಫಜರಿಕ್ ಮೊಹಮ್ಮದ್ ರಾಜಿಫ್ ವಿರುದ್ಧ ಗೆದ್ದಿದ್ದರು.ಭಾರತದ ಆಟಗಾರ ಈ ಋತುವಿನಲ್ಲಿ ಜಯಿಸಿದ ಎರಡನೇ ಬಿಡಬ್ಲ್ಯುಎಫ್ ಜೂನಿಯರ್ ಪ್ರಶಸ್ತಿ ಇದಾಗಿದೆ.

ಹೋದ ತಿಂಗಳು ನಡೆದಿದ್ದ 19 ವರ್ಷದೊಳಗಿನವರ ಕೊರಿಯಾ ಓಪನ್ ಇಂಟರ್ನ್ಯಾಷನಲ್ ಚಾಲೆಂಜ್ ಟೂರ್ನಿಯಲ್ಲೂ ಅವರು
ಚಾಂಪಿಯನ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.