ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟರ್‌ಪೋಲೊ: ಕರ್ನಾಟಕಕ್ಕೆ ಮುನ್ನಡೆ

ಜೂನಿಯರ್‌ ರಾಷ್ಟ್ರೀಯ ಅಕ್ವಾಟಿಕ್‌ ಚಾಂಪಿಯನ್‌ಷಿಪ್‌
Published 20 ಜುಲೈ 2023, 16:26 IST
Last Updated 20 ಜುಲೈ 2023, 16:26 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡವು ಚೆನ್ನೈನಲ್ಲಿ ನಡೆಯುತ್ತಿರುವ 49ನೇ ಜೂನಿಯರ್‌ ರಾಷ್ಟ್ರೀಯ ಅಕ್ವಾಟಿಕ್‌ ಚಾಂಪಿಯನ್‌ಷಿಪ್‌ನ ವಾಟರ್‌ ಪೋಲೊ ಸ್ಪರ್ಧೆಯಲ್ಲಿ ಮೂರನೇ ದಿನವಾದ ಗುರುವಾರ ಗೆಲುವು ದಾಖಲಿಸಿದವು.

ನಿಹಾರ್‌ ರಾಜೇಶ್‌ (7 ಗೋಲು) ಅವರ ಆಟದ ಬಲದಿಂದ ರಾಜ್ಯದ ಬಾಲಕರ ತಂಡವು ಹರಿಯಾಣ ತಂಡವನ್ನು 11–8ರಿಂದ ಮಣಿಸಿತು. ಕರ್ನಾಟಕದ ಎಸ್‌.ಆರ್‌. ಚಂದ್ರುವರ್ಧನ್‌ (3), ಚಿನ್ಮಯ್ ಪೈ (1) ಗೋಲು ದಾಖಲಿಸಿದರು.  

ರಾಜ್ಯದ ಬಾಲಕಿಯರ ತಂಡವು ದೆಹಲಿ ತಂಡವನ್ನು 12–5ರಿಂದ ಮಣಿಸಿತು. ರೋಷಿಣಿ ಸರವಣನ್ (3), ಲಾವಣ್ಯ ಯೋಗೇಶ್‌, ಡಿ.ಕೆ. ದೃತಿ, ಪ್ರಚೇತಾ ಆರ್‌. ರಾವ್‌ (ತಲಾ 2), ಸಿ.ನಿತ್ಯಾ, ಡಿ.ಎಂ. ನಾಗಶೇಖರ್‌, ತನ್ವಿ ರವಿ (ತಲಾ 1) ಗೋಲು ದಾಖಲಿಸಿದರು. ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿದ್ದು, ತಲಾ ಎರಡರಲ್ಲಿ ಗೆಲುವು ದಾಖಲಿಸಿವೆ.

ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಕೇರಳ ತಂಡವು ಗುಜರಾತ್‌ ತಂಡವನ್ನು 8–3ರಿಂದ, ತಮಿಳುನಾಡು ತಂಡವು ತೆಲಂಗಾಣ ತಂಡವನ್ನು 11–1ರಿಂದ, ಬಂಗಾಲ ತಂಡವು ಪಂಜಾಬ್‌ ತಂಡವನ್ನು 16–4ರಿಂದ ಮಹಾರಾಷ್ಟ್ರ ತಂಡವು ಗುಜರಾತ್‌ ತಂಡವನ್ನು 12–6ರಿಂದ ಮಣಿಸಿತು.

ಬಾಲಕಿಯರ ವಿಭಾಗದ ಇತರ ಪಂದ್ಯಗಳಲ್ಲಿ ಕೇರಳ ತಂಡವು ತಮಿಳುನಾಡು ತಂಡವನ್ನು 12–2ರಿಂದ, ಮಹಾರಾಷ್ಟ್ರ ತಂಡವು ಹರಿಯಾಣ ತಂಡವನ್ನು 17–1ರಿಂದ, ಬಂಗಾಲ ತಂಡವು ತೆಲಂಗಾಣ ತಂಡವನ್ನು 18–5ರಿಂದ ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT