ನಿಂಗ್ಬೊ, ಚೀನಾ: ಭಾರತದ ಧ್ರುವ್ ಕಪಿಲಾ ಮತ್ತು ತನಿಶಾ ಕ್ರಾಸ್ಟೊ ಜೋಡಿಯು ಮಂಗಳವಾರ ಇಲ್ಲಿ ಆರಂಭವಾದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಷಿಪ್ನ ಮಿಶ್ರ ಡಬಲ್ಸ್ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಧ್ರುವ್– ಕ್ರಾಸ್ಟೊ ಅವರು 15-21, 21-12, 21-11ರ ಮೂರು ಗೇಮ್ಗಳ ಹೋರಾಟದಲ್ಲಿ ಮಲೇಷ್ಯಾದ ಹೂ ಪಾಂಗ್ ರಾನ್ ಮತ್ತು ಸು ಯಿನ್ ಚೆಂಗ್ ಅವರನ್ನು ಹಿಮ್ಮೆಟ್ಟಿಸಿದರು. ಬುಧವಾರ ನಡೆಯುವ ಎರಡನೇ ಸುತ್ತಿನಲ್ಲಿ ಭಾರತದ ಜೋಡಿಯು ಚೀನಾ ತೈಪೆಯ ಹಾಂಗ್ ವೀ ಯೆ ಮತ್ತು ನಿಕೋಲ್ ಗೊನ್ಜಾಲೆಸ್ ಚಾನ್ ಅವರನ್ನು ಎದುರಿಸಲಿದೆ.

ಭಾರತದ ಇತರ ಮೂರು ಮಿಶ್ರ ಡಬಲ್ಸ್ ಜೋಡಿಗಳು ಆರಂಭದ ಸುತ್ತಿನಲ್ಲೇ ನಿರಾಸೆ ಮೂಡಿಸಿದವು. ಸತೀಶ್ ಕುಮಾರ್ ಕರುಣಾಕರನ್ ಮತ್ತು ಆದ್ಯಾ ವರಿಯಾತ್ ಜೋಡಿ 18-21, 19-21ರಿಂದ ಮೂರನೇ ಶ್ರೇಯಾಂಕದ ಸೂನ್ ಹುವಾಟ್ ಗೋ ಮತ್ತು ಶೆವೊನ್ ಜೇಮಿ ಲೈ ಅವರಿಗೆ ಮಣಿಯಿತು.

ಆಶಿತ್ ಸೂರ್ಯ ಮತ್ತು ಅಮೃತಾ ಪ್ರಮುತೇಶ್ ಅವರು 9-21, 11-21ರಿಂದ ಮಲೇಷ್ಯಾದ ತುಲಿತ್ ಪಲ್ಲಿಯಗುರು ಮತ್ತು ಪಾಂಚಾಲಿ ಅಧಿಕಾರಿ ವಿರುದ್ಧ ಸೋತರು. ರೋಹನ್ ಕಪೂರ್ ಮತ್ತು ಋತ್ವಿಕಾ ಶಿವಾನಿ ಗಡ್ಡೆ ಜೋಡಿ 21-18, 17-21, 17-21ರಿಂದ ಮಲೇಷ್ಯಾದ ರಾಯ್ ಕಿಂಗ್ ಯಾಪ್ ಮತ್ತು ವ್ಯಾಲೆರಿ ಸಿಯೋವ್ ಜೋಡಿಗೆ ಶರಣಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.