ಗುವಾಹಟಿ: ಕರ್ನಾಟಕದ ಈಜು ಸ್ಪರ್ಧಿಗಳು ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ಮಂಗಳವಾರ ಮೂರು ಚಿನ್ನ ಸೇರಿ ಒಂಬತ್ತು ಪದಕಗಳು ರಾಜ್ಯದ ಸ್ಪರ್ಧಿಗಳ ಪಾಲಾದವು.

21 ವರ್ಷದೊಳಗಿನ ಪುರುಷರ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಸಂಜಯ್ ಸಿ.ಜೆ 2 ನಿಮಿಷ 9.08 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಗಳಿಸಿದರು. ಇದೇ ವಿಭಾಗದಲ್ಲಿ ಬೆಳ್ಳಿ ಪದಕವು ಸೈಫ್ ಚಂದನ್ ಕೆ.ಎಸ್.(2 ನಿ. 10.12 ಸೆಕೆಂಡು) ಅವರಿಗೆ ಒಲಿಯಿತು.

17 ವರ್ಷದೊಳಗಿನ ಬಾಲಕರ 50 ಮೀ, ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಎಸ್.ಹಿತೇನ್ ಮಿತ್ತಲ್ (23.90 ಸೆಕೆಂಡು) ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

17 ವರ್ಷದೊಳಗಿನ ಬಾಲಕರ 200 ಮೀ.ಬಟರ್‌ಫ್ಲೈನಲ್ಲಿ ಸಂಭವ್ ಆರ್ (2 ನಿ. 10.13 ಸೆಕೆಂಡು) ಕಂಚು ತಮ್ಮದಾಗಿಸಿಕೊಂಡರು. ಇದೇ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಅನ್ವೇಷಾ ಗಿರೀಶ್ (2 ನಿ. 25.51 ಸೆಕೆಂಡು) ಬೆಳ್ಳಿ ಗೆರೆ ಮೂಡಿಸಿದರು. 21 ವರ್ಷದೊಳಗಿನ ಪುರುಷರ 50 ಮೀ. ಫ್ರೀಸ್ಟೈಲ್‌ನಲ್ಲಿ ಶ್ರೀಹರಿ ನಟರಾಜ್ 24.06 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗಳಿಸಿದರು.

21 ವರ್ಷದೊಳಗಿನ ಪುರುಷರ 50 ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದ ಬೆಳ್ಳಿ ಪೃಥ್ವಿಕ್ ಡಿ.ಎಸ್.(30.22 ಸೆಕೆಂಡು) ಅವರ ಪಾಲಾಯಿತು. ರಾಜ್ಯಕ್ಕೆ ಮತ್ತೊಂದು ಚಿನ್ನದ ಪದಕವು ತಂಡ ವಿಭಾಗದಲ್ಲಿ ಲಭಿಸಿತು. ಸಂಭವ್ ಆರ್, ವೈಭವ್ ಶೇಠ್, ಎಸ್.ಹಿತೇನ್ ಮಿತ್ತಲ್ ಹಾಗೂ ಅನೀಶ್ ಗೌಡ ಅವರನ್ನೊಳಗೊಂಡ ತಂಡ 17 ವರ್ಷದೊಳಗಿನವರ 4x100 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 3 ನಿಮಿಷ 38.53 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.