ಜೈಪುರ (ಪಿಟಿಐ): ಒಲಿಂಪಿಯನ್ ಈಜುತಾರೆ ಶ್ರೀಹರಿ ನಟರಾಜ್ ಅವರು ಇಲ್ಲಿ ಶುಕ್ರವಾರ ಮುಕ್ತಾಯಗೊಂಡ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ (ಕೆಐಯುಜಿ)ದಲ್ಲಿ ಅತ್ಯಂತ ಯಶಸ್ವಿ ಕ್ರೀಡಾಪಟು ಎನಿಸಿದರು. ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಅವರು ಒಂಬತ್ತು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದರು.

ಕಳೆದ ಬಾರಿಯ ಚಾಂಪಿಯನ್ ಚಂಡೀಗಢ ವಿಶ್ವವಿದ್ಯಾಲಯವು ಸಮಗ್ರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು. 42 ಚಿನ್ನ, 14 ಬೆಳ್ಳಿ ಮತ್ತು 11 ಕಂಚು ಸೇರಿದಂತೆ ಒಟ್ಟು 67 ಪದಕಗಳೊಂದಿಗೆ ತನ್ನ ಅಭಿಯಾನವನ್ನು ಮುಗಿಸಿತು.

ಜೈನ್ ವಿಶ್ವವಿದ್ಯಾಲಯವು 30 ಚಿನ್ನ, ಒಂಬತ್ತು ಬೆಳ್ಳಿ ಮತ್ತು 11 ಕಂಚು ಸೇರಿದಂತೆ ಒಟ್ಟು 50 ಪದಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿತು. ಈ ಪೈಕಿ 45 ಪದಕಗಳು ಈಜು ಸ್ಪರ್ಧೆಯಲ್ಲಿ ಗೆದ್ದರೆ, ಅಥ್ಲೆಟಿಕ್ಸ್ನಲ್ಲಿ ಮೂರು, ಟೇಬಲ್ ಟೆನಿಸ್ ಮತ್ತು ಬಾಸ್ಕೆಟ್ಬಾಲ್ನಲ್ಲಿ ತಲಾ ಒಂದು ಪದಕಗಳನ್ನು ಜಯಿಸಿತು.

ಕೆಐಯುಜಿಯಲ್ಲಿ ಈ ಬಾರಿ ಪರಿಚಯಿಸಲಾದ ಕ್ಯಾನೋಯಿಂಗ್ ಮತ್ತು ಕಯಾಕಿಂಗ್ನಲ್ಲಿ ನೀಡಲಾದ 30 ಚಿನ್ನದ ಪದಕಗಳಲ್ಲಿ 23, ಈಜು ಸ್ಪರ್ಧೆಯಲ್ಲಿ ಆರು, ಅಥ್ಲೆಟಿಕ್ಸ್ನಲ್ಲಿ ಐದು, ಕುಸ್ತಿಯಲ್ಲಿ ಎರಡು, ವೇಟ್ಲಿಫ್ಟಿಂಗ್, ಶೂಟಿಂಗ್, ಸೈಕ್ಲಿಂಗ್, ಆರ್ಚರಿ, ಟೇಬಲ್ ಟೆನಿಸ್ ಮತ್ತು ಕಬಡ್ಡಿಯಲ್ಲಿ ತಲಾ ಒಂದು ಚಿನ್ನದ ಪದಕಗಳನ್ನು ಚಂಡೀಗಢ ವಿವಿ ಗೆದ್ದಿದೆ.

ಪಂಜಾಬ್ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (ಎಲ್ಪಿಯು) 78 ಪದಕಗಳೊಂದಿಗೆ ರನ್ನರ್ ಅಪ್ ಆಗಿ ಆಯಿತು. 32 ಚಿನ್ನ, 24 ಬೆಳ್ಳಿ ಮತ್ತು 22 ಕಂಚುಗಳನ್ನು ಗೆದ್ದುಕೊಂಡಿತು. ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯ (ಜಿಎನ್ಡಿಯು) 32 ಚಿನ್ನ, 22 ಬೆಳ್ಳಿ ಮತ್ತು 18 ಕಂಚಿನೊಂದಿಗೆ ಮೂರನೇ ಸ್ಥಾನ ಗಳಿಸಿತು.

ಮಂಗಳೂರು ವಿಶ್ವವಿದ್ಯಾಲಯ ಏಳು ಪದಕಗಳೊಂದಿಗೆ (4 ಚಿನ್ನ, 2 ಬೆಳ್ಳಿ, 1 ಕಂಚು) 12ನೇ ಸ್ಥಾನ ಪಡೆಯಿತು. ಬೆಂಗಳೂರಿನ ಕ್ರೈಸ್ಟ್ ವಿ.ವಿ ಎಂಟು ಪದಕ (2 ಚಿನ್ನ, 3 ಬೆಳ್ಳಿ, 3 ಕಂಚು), ರೇವಾ ವಿ.ವಿ 3 ಪದಕ (1 ಚಿನ್ನ, 2 ಬೆಳ್ಳಿ), ಕರ್ನಾಟಕ ವಿ.ವಿ 3 ಪದಕ (1 ಚಿನ್ನ, 1 ಬೆಳ್ಳಿ, 1 ಕಂಚು) ಗೆದ್ದುಕೊಂಡಿತು.

ಐದನೇ ಆವೃತ್ತಿಯ ಕ್ರೀಡಾಕೂಟವು ರಾಜಸ್ಥಾನದ ಏಳು ನಗರಗಳಲ್ಲಿ ನಡೆಯಿತು. ದೇಶದ 222 ವಿಶ್ವವಿದ್ಯಾಲಯಗಳಿಂದ 4,448 ಸ್ಪರ್ಧಿಗಳು 23 ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿದ್ದರು. 12 ದಿನ ನಡೆದ ಸ್ಪರ್ಧೆಯಲ್ಲಿ ಎರಡು ಅಖಿಲ ಭಾರತ ವಿ.ವಿ ದಾಖಲೆ ಮತ್ತು 12 ಹೊಸ ಕೂಟ ದಾಖಲೆಗಳು ನಿರ್ಮಾಣವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.