ನಡಿಗೆ ಸ್ಪರ್ಧಿಗಳಾದ ಕೆ.ಟಿ.ಇರ್ಫಾನ್, ಸಂದೀಪ್ ಕುಮಾರ್, ರಾಹುಲ್ ರೋಹಿಲ್ಲಾ (ಪುರುಷರ 20 ಕಿ.ಮೀ. ವಿಭಾಗ), ಭಾವನಾ ಜಾಟ್ ಹಾಗೂ ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 20 ಕಿ.ಮೀ. ವಿಭಾಗ) ಈಗಾಗಲೇ ಒಲಿಂಪಿಕ್ಸ್ ಟಿಕೆಟ್ ಗಳಿಸಿದ್ದಾರೆ. ಜಾವೆಲಿನ್ ಪಟುಗಳಾದ ನೀರಜ್ ಚೋಪ್ರಾ, ಶಿವಪಾಲ್ ಸಿಂಗ್, 3000 ಮೀ. ಸ್ಟೀಪಲ್ಚೇಸ್ನಲ್ಲಿ ಅವಿನಾಶ್ ಸಬ್ಳೆ ಅಲ್ಲದೆ 4X400 ಮೀ. ಮಿಶ್ರ ರಿಲೇ ತಂಡವು ಕೂಡ ಈಗಾಗಲೇ ಟೋಕಿಯೊಗೆ ಟಿಕೆಟ್ ಪಡೆದಿದೆ.