ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬಾಕ್ಸಿಂಗ್: ಫೈನಲ್‌ಗೆ ಲವ್ಲಿನಾ, ನಿಖತ್

Last Updated 25 ಡಿಸೆಂಬರ್ 2022, 18:36 IST
ಅಕ್ಷರ ಗಾತ್ರ

ಭೋಪಾಲ್: ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕವಿಜೇತೆ ಲವ್ಲಿನಾ ಬೊರ್ಗೊಹೈನ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ರೈಲ್ವೆ ತಂಡದ ಒಟ್ಟು ಎಂಟು ಬಾಕ್ಸಿಂಗ್ ಪಟುಗಳು ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ. 2019ರ ವಿಶ್ವ ಬಾಕ್ಸಿಂಗ್ ಬೆಳ್ಳಿ ಪದಕ ಜಯಿಸಿದ್ದ ಮಂಜುರಾಣಿ (48.ಕೆ.ಜಿ), 2017ರ ವಿಶ್ವ ಯೂತ್ ಚಾಂಪಿಯನ್ ಜ್ಯೋತಿ ಗುಲಿಯಾ (52 ಕೆ.ಜಿ) ಈ ತಂಡದಲ್ಲಿದ್ದಾರೆ. ರೈಲ್ವೆಯ ಅನುಪಮ (50 ಕೆ.ಜಿ), ಶಿಕ್ಷಾ (54 ಕೆ.ಜಿ), ಪೂನಂ (60 ಕೆ.ಜಿ), ಶಶಿ (63 ಕೆ.ಜಿ), ಅನುಪಮಾ (81 ಕೆ.ಜಿ) ಹಾಗೂ ನೂಪುರ್ (81+ಕೆಜಿ) ಕೂಡ ಫೈನಲ್ ಪ್ರವೇಶಿಸಿದ್ದಾರೆ.

ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಿಖತ್ 50 ಕೆ.ಜಿ ವಿಭಾಗದ ಸೆಮಿಫೈನಲ್‌ ಬೌಟ್‌ನಲ್ಲಿ 5–0ಯಿಂದ ಎಐಪಿಯ ಶಿವೀಂದರ್ ಕೌರ್ ವಿರುದ್ಧ ಗೆದ್ದರು. ಅವರು ಫೈನಲ್‌ನಲ್ಲಿ ಅನಾಮಿಕಾ ಅವರನ್ನು ಎದುರಿಸುವರು.

ಅಸ್ಟಾಂ ರಾಜ್ಯದ ಲವ್ಲಿನಾ 75 ಕೆ.ಜಿ. ವಿಭಾಗದಲ್ಲಿ ಮಧ್ಯ ಪ್ರದೇಶದ ಜಿಗ್ಯಾಸಾ ರಜಪೂತ್ ವಿರುದ್ಧ ಗೆದ್ದರು.‍ಚಿನ್ನದ ಪದಕದ ಸುತ್ತಿನಲ್ಲಿ ಅವರು ಎಸ್‌ಎಸ್‌ಸಿಬಿಯ ಅರುಂಧತಿ ಅವರನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT