ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಬಾಕ್ಸಿಂಗ್: ನಿಖತ್, ಲವ್ಲಿನಾಗೆ ಚಿನ್ನ

Last Updated 26 ಡಿಸೆಂಬರ್ 2022, 20:12 IST
ಅಕ್ಷರ ಗಾತ್ರ

ಭೋಪಾಲ್: ವಿಶ್ವ ಚಾಂಪಿಯನ್ ನಿಖತ್ ಜರೀನ್ ಹಾಗೂ ಒಲಿಂಪಿಕ್ ಪದಕವಿಜೇತೆ ಲವ್ಲಿನಾ ಬೋರ್ಗೊಹೈನ್ ಸೋಮವಾರ ಇಲ್ಲಿ ನಡೆದ ಎಲೀಟ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು.

ರೈಲ್ವೆ ಕ್ರೀಡಾ ಅಭಿವೃದ್ಧಿ ಮಂಡಳಿ (ಆರ್‌ಎಸ್‌ಪಿಬಿ) ಒಟ್ಟು 10 ಪದಕಗಳನ್ನು ಗೆದ್ದು ತಂಡ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು.

ತೆಲಂಗಾಣದ ನಿಖತ್ ಜರೀನ್ 50 ಕೆ.ಜಿ. ವಿಭಾಗದಲ್ಲಿ ಆರ್‌ಎಸ್‌ಪಿಬಿಯ ಅನಾಮಿಕಾ ವಿರುದ್ಧ ಗೆದ್ದರು. 26 ವರ್ಷದ ನಿಖತ್ ಹಾಲಿ ಮಹಿಳಾ ವಿಶ್ವ ಚಾಂಪಿಯನ್ ಕೂಡ ಹೌದು.

75 ಕೆ.ಜಿ. ಫೈನಲ್‌ನಲ್ಲಿಅಸ್ಸಾಂ ತಂಡದ ಲವ್ಲಿನಾ ಅವರು ಸರ್ವಿಸಸ್‌ನ ಅರುಂಧತಿ ಚೌಧರಿ ವಿರುದ್ಧ 5–0ಯಿಂದ ಗೆದ್ದರು.

48 ಕೆ.ಜಿ. ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಮಂಜು ರಾಣಿ 5–0ಯಿಂದ ತಮಿಳುನಾಡಿನ ಎಸ್‌. ಕಲೈವಾಣಿ ವಿರುದ್ಧ ಗೆದ್ದಿತು.

ಶಿಕ್ಷಾ (54ಕೆ.ಜಿ), ಪೂನಂ (60 ಕೆ.ಜಿ), ಶಶಿ ಚೋಪ್ರಾ (63ಕೆ.ಜಿ) ಮತ್ತು ನೂಪುರ್ (+81 ಕೆಜಿ) ಅವರೂ ಚಿನ್ನದ ಪದಕಗಳನ್ನು ಜಯಿಸಿದರು. ಅದರಿಂದಾಗಿ ರೈಲ್ವೆ ತಂಡವು ಪಾರಮ್ಯ ಮೆರೆಯಿತು.

ಹರಿಯಾಣದ ಮನೀಷಾ (57ಕೆ.ಜಿ), ಸ್ವೀಟಿ (81 ಕೆ.ಜಿ), ಎಸ್‌ಎಸ್‌ಸಿಬಿಯ ಸಾಕ್ಷಿ (52ಕೆ.ಜಿ), ಮಧ್ಯಪ್ರದೇಶದ ಮಂಜು ಬೆಂಬೊರಿಯಾ (66 ಕೆ.ಜಿ) ಕೂಡ ಚಿನ್ನದ ಸಾಧನೆ ಮಾಡಿದರು.

ಟೂರ್ನಿಯ 12 ವಿಭಾಗಗಳಲ್ಲಿ 302 ಬಾಕ್ಸಿಂಗ್ ಪಟುಗಳು ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT