ಕ್ರೀನ್ಸ್, ಸ್ವಿಟ್ಜರ್ಲೆಂಡ್ (ಪಿಟಿಐ): ಅಪೂರ್ವ ಆಟ ಆಡಿದ ಭಾರತದ ಮಹೇಶ್ ಮಂಗಾವ್ಕರ್, ಸೆಕಿಸುಯಿ ಓಪನ್ ಪಿಎಸ್ಎ ಚಾಲೆಂಜರ್ ಟೂರ್ ಸ್ಕ್ವಾಷ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಈ ಟೂರ್ನಿಯಲ್ಲಿ ಭಾರತದ ಆಟಗಾರ ಜಯಿಸಿದ ಎರಡನೇ ಟ್ರೋಫಿ ಇದಾಗಿದೆ. 2016ರಲ್ಲಿ ಅವರು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಮಹೇಶ್ 11–9, 3–11, 11–5, 11–5ಯಿಂದ ಸ್ಪೇನ್ನ ಬರ್ನಟ್ ಜಾವುಮ್ ಅವರನ್ನು ಸೋಲಿಸಿದರು. ಈ ಮೂಲಕ ಪಿಎಸ್ಎ ಟೂರ್ನಿಯಲ್ಲಿ ಒಟ್ಟಾರೆ ಎಂಟನೇ ಪ್ರಶಸ್ತಿ ಗೆದ್ದ ಹಿರಿಮೆಗೂ ಭಾಜನರಾದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಮಹೇಶ್ ಮತ್ತು ಮೂರನೇ ಶ್ರೇಯಾಂಕ ಗಳಿಸಿದ್ದ ಬರ್ನಟ್ ಅವರು ಮೊದಲ ಗೇಮ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ರೋಚಕ ಘಟ್ಟದಲ್ಲಿ ಮಿಂಚಿನ ಆಟ ಆಡಿದ ಭಾರತದ ಆಟಗಾರ ಗೇಮ್ ಕೈವಶ ಮಾಡಿಕೊಂಡರು.

ಆರಂಭಿಕ ನಿರಾಸೆಯಿಂದ ಬರ್ನಟ್ ಎದೆಗುಂದಲಿಲ್ಲ. ಎರಡನೇ ಗೇಮ್ನಲ್ಲಿ ತಿರುಗೇಟು ನೀಡಿದ ಅವರು 1–1ರಲ್ಲಿ ಸಮಬಲ ಮಾಡಿಕೊಂಡರು.

ನಂತರದ ಎರಡು ಗೇಮ್ಗಳಲ್ಲಿ ಮಹೇಶ್ ಪರಿಣಾಮಕಾರಿ ಸಾಮರ್ಥ್ಯ ತೋರಿದರು. ಎದುರಾಳಿ ಆಟಗಾರನನ್ನು ಕಂಗೆಡಿಸಿದ ಅವರು 48ನೇ ನಿಮಿಷದಲ್ಲಿ ಗೆಲುವಿನ ತೋರಣ ಕಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.