ಶಾತೋಹು: ಭಾರತದ ರೈಜಾ ಧಿಲ್ಲೋನ್ ಮತ್ತು ಮಹೇಶ್ವರಿ ಚೌಹಾಣ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್‌ನ ಮಹಿಳೆಯರ ಸ್ಕೀಟ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 14 ಮತ್ತು23ನೇ ಸ್ಥಾನ ಪಡೆಯುವ ಮೂಲಕ ಭಾನುವಾರ ತಮ್ಮ ಸ್ಪರ್ಧೆ ಮುಗಿಸಿದರು.
ಮಹೇಶ್ವರಿ ಅವರು ಶನಿವಾರ ನಡೆದಿದ್ದ ಮೂರು ಸೇರಿದಂತೆ ಒಟ್ಟು ಐದು ಸೀರೀಜ್ ಗಳಲ್ಲಿ 118 ಅಂಕ ಗಳಿಸಿದರು. ಸಿರೀಜ್‌ಗಳಲ್ಲಿ ಅವರು 23, 24, 24, 25, 22 ಅಂಕ ದಾಖಲಿಸಿದರು.
ರೈಜಾ ಅವರು 21, 22, 23, 23, 24 ಅಂಕ ದಾಖಲಿಸುವ ಮೂಲಕ ಒಟ್ಟು 113 ಅಂಕ ಪಡೆದರು.
ಅರ್ಹತಾ ಸುತ್ತಿನಲ್ಲಿ ಅಗ್ರ ಆರು ಸ್ಥಾನ ಪಡೆದ ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ, ಇಟಲಿಯ ಡಯಾನಾ ಬಕೊಸಿ ಕೂಡಾ ಅರ್ಹತಾ ಸುತ್ತಿನಲ್ಲಿ ವಿಫಲರಾದರು. 117 ಅಂಕಗಳೊಂದಿಗೆ ಮಹೇಶ್ವರಿ ಅವರ ನಂತರ 15ನೇ ಸ್ಥಾನ ಪಡೆದರು.
ಮೊದಲ ದಿನದ ಅರ್ಹತಾ ಸುತ್ತಿನಲ್ಲಿ ಮಹೇಶ್ವರಿ ಅವರು ಒಟ್ಟಾರೆ 71 ಅಂಕಗಳೊಂ ದಿಗೆ 8ನೇ ಸ್ಥಾನದಲ್ಲಿದ್ದರು. ಹಿಂದಿನ ಸಿರೀಜ್‌ಗಳಲ್ಲಿ 23, 24, 24 ಅಂಕಗಳಿಗೆ ಗುರಿಯಿಟ್ಟಿದ್ದ ಅವರು, ಭಾನುವಾರ 25 ಅಂಕಕ್ಕೆ ಗುರಿಯಿಟ್ಟರೂ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.
ಒಟ್ಟು 29 ಶೂಟರ್‌ಗಳಲ್ಲಿ ರೈಜಾ ಅವರು 25ನೇ ಸ್ಥಾನ ಪಡೆದರು.