ಕ್ವಾಲಾಲಂಪುರ: ಅಮೋಘ ಆಟವಾಡಿದಸೈನಾ ನೆಹ್ವಾಲ್ ಮತ್ತು ವಿಶ್ವ ಚಾಂಪಿಯನ್ ಪಿ.ವಿ.ಸಿಂಧು, ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ಫೈನಲ್ಗೆ ದಾಪುಗಾಲಿಟ್ಟರು.

ಆರನೇ ಶ್ರೇಯಾಂಕದ ಸಿಂಧು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ 21–10, 21–15 ಗೇಮ್ಗಳಿಂದ ಜಪಾನ್ನ ಆಯಾ ಒಹೊರಿ ಅವರನ್ನು ಹಿಮ್ಮೆಟ್ಟಿಶಿದರು. ಒಹೋರಿ ವಿರುದ್ಧ ಈ ಸತತ ಒಂಬತ್ತನೇ ಗೆಲುವಿಗೆ ಸಿಂಧು ತೆಗೆದುಕೊಂಡಿದ್ದು 34 ನಿಮಿಷಗಳನ್ನಷ್ಟೇ.

ಬಾಸೆಲ್ನಲ್ಲಿ ಕಳೆದ ವರ್ಷ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ್ದ 24 ವರ್ಷದ ಸಿಂಧು, ಎಂಟರ ಘಟ್ಟದ ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ತೈ ತ್ಜು ಯಿಂಗ್ ಅವರನ್ನು ಎದುರಿಸಲಿದ್ದಾರೆ. ಚೀನಾ ತೈಪಿಯ ಈ ಆಟಗಾರ್ತಿ ಇನ್ನೊಂದು ಹಣಾಹಣಿಯಲ್ಲಿ ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ಮೇಲೆ 21–18, 16–21, 21–10ರಲ್ಲಿ ಜಯ ಪಡೆದರು.

ಶ್ರೇಯಾಂಕರಹಿತ ಆಟಗಾರ್ತಿ ಸೈನಾ ಮತ್ತೊಂದು ಪ್ರಿಕ್ವಾರ್ಟರ್ಫೈನಲ್ನಲ್ಲಿ 25–23, 21–12ರಿಂದ ಎಂಟನೇ ಶ್ರೇಯಾಂಕದ ಆನ್ ಸೆ ಯಾಂಗ್ ಮೆಳೆ ಜಯಗಳಿಸಿದರು. ಈ ಪಂದ್ಯ 39 ನಿಮಿಷಗಳವರೆಗೆ ನಡೆಯಿತು. ಇದು ಯಾಂಗ್ ವಿರುದ್ಧ ಸೈನಾ ದಾಖಲಿಸಿದ ಮೊದಲ ಗೆಲುವು.

ಒಲಿಂಪಿಕ್ ಚಾಂಪಿಯನ್ ಕರೋಲಿನಾ ಮರಿನ್ (ಸ್ಪೇನ್), ಸೈನಾ ಅವರ ಮುಂದಿನ ಎದುರಾಳಿಯಾಗಿದ್ದಾರೆ.

ಸವಾಲು ಅಂತ್ಯ: ಸಮೀರ್ ವರ್ಮಾ ಮತ್ತು ಎಚ್.ಎಸ್.ಪ್ರಣಯ್ ಸೋಲನುಭವಿಸುವ ಮೂಲಕ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಅಗ್ರಮಾನ್ಯ ಆಟಗಾರ ಕೆಂಟೊ ಮೊಮೊಟಾ (ಜಪಾನ್) 21–14, 16–21 ರಿಂದ ಪ್ರಣಯ್ ಅವರನ್ನು ಹಿಮ್ಮೆಟ್ಟಿಸಲು ಹೆಚ್ಚು ಪ್ರಯಾಸಪಡಲಿಲ್ಲ.ವರ್ಮಾ 19–21, 20–22 ರಲ್ಲಿ ಮಲೇಷಿಯಾದ ಲೀ ಝಿ ಜಿಯಾ ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.