ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಗ್ರ್ಯಾನ್‌ಪ್ರಿಗೆ ತಟ್ಟಿದ ಬಿಸಿಗಾಳಿ: ಮೂರು ಲ್ಯಾಪ್‌ಗಳು ಕಡಿತ

Published 23 ಸೆಪ್ಟೆಂಬರ್ 2023, 6:41 IST
Last Updated 23 ಸೆಪ್ಟೆಂಬರ್ 2023, 6:41 IST
ಅಕ್ಷರ ಗಾತ್ರ

ನೊಯ್ಡಾ: ಅತಿಯಾದ ಬಿಸಿಗಾಳಿಯಿಂದಾಗಿ ಬಳಲಿದ ಮೊಟೊಜಿಪಿ ಬೈಕ್ ಸವಾರರ ಬೇಡಿಕೆಯಂತೆ ಇಲ್ಲಿ ಆರಂಭವಾಗಲಿರುವ ಇಂಡಿಯನ್ ಗ್ರ್ಯಾನ್‌ಪ್ರಿನಲ್ಲಿ ಮೂರು ಲ್ಯಾಪ್‌ಗಳನ್ನು ಕಡಿತಗೊಳಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಇಲ್ಲಿನ ಬುದ್ಧ ಸಸರ್ಕ್ಯೂಟ್ ಶುಕ್ರವಾರ ನಡೆದ ಅಭ್ಯಾಸ ರೇಸ್‌ ಸಂದರ್ಭದಲ್ಲಿ ದೆಹಲಿಯ ಅತಿಯಾದ ಬಿಸಿ ಗಾಳಿ ಕುರಿತು ರೇಸರ್‌ಗಳು ತಮ್ಮ ಅಳಲು ತೋಡಿಕೊಂಡಿದ್ದರು. ಜತೆಗೆ ಕ್ರಮಿಸುವ ದೂರವನ್ನು ಕಡಿತಗೊಳಿಸುವಂತೆಯೂ ಬೇಡಿಕೆ ಇಟ್ಟಿದ್ದರು.

ಇದರಿಂದಾಗಿ ಭಾನುವಾರ ನಡೆಯಲಿರುವ ರೇಸ್‌ನಲ್ಲಿ ಯೋಜನೆಯಂತೆ 24 ಲ್ಯಾಪ್‌ಗಳ ಬದಲಾಗಿ 21 ಲ್ಯಾಪ್‌ಗಳಿಗೆ ಸೀಮಿತಗೊಳಿಸಲಾಗಿದೆ. ಶನಿವಾರ ಮಧ್ಯಾಹ್ನ ನಡೆಯಲಿರುವ ಸ್ಪ್ರಿಂಟ್‌ ರೇಸ್‌ನಲ್ಲೂ 11 ಲ್ಯಾಪ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಶುಕ್ರವಾರ ಒಟ್ಟು ಎರಡು ಅಭ್ಯಾಸ ರೇಸ್‌ಗಳು ಜರುಗಿದವು. ಈ ಸಂದರ್ಭದಲ್ಲಿ ರೇಸರ್‌ಗಳು ಬಿಸಿಗಾಳಿಯಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಈವರೆಗಿನ ಚಾಂಪಿಯನ್‌ ಫ್ರಾನ್ಸೆಸ್ಕೊ ಬಗ್ನಾಯಿಯಾ ವಿವರಿಸಿ, ಇದು ನಿಜಕ್ಕೂ ಸವಾಲಿನ ಕೆಲಸ ಎಂದರು.

‘ನಾನು ಎಂದೂ ಇಂಥ ಬಿಸಿ ಗಾಳಿಯನ್ನು ಅನುಭವಿಸಿಲ್ಲ. ಮಲೇಷಿಯಾ ಹಾಗೂ ಥ್ಯಾಯ್ಲೆಂಡ್‌ಗಳೇ ಹೆಚ್ಚು ಸೆಕೆ ಪ್ರದೇಶ ಎಂದುಕೊಂಡಿದ್ದೆ. ಆದರೆ ಇಲ್ಲಿನ ಸುಡು ಬಿಸಿಲು ನಮ್ಮನ್ನು ಹೈರಾಣಾಗಿಸಿದೆ. ಟ್ರ್ಯಾಕ್‌ನ ಕೆಲವೆಡೆ ಸುಡುವ ಅನುಭವವೂ ಆಗುತ್ತಿದೆ’ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಡುಕಾಟಿಯ ಬಗ್ನಾಯಿಯಾ ಅವರು 36 ಅಂಕಗಳಿಂದ ಮುಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT