ಬೆಂಗಳೂರು: ಕ್ರೀಡಾಪ್ರೇಮಿಗಳ ಕಣ್ಮಣಿಯಾಗಿ ಮತ್ತು 11 ಜನ ಅಂತರರಾಷ್ಟ್ರೀಯ ಅಥ್ಲೀಟ್ಗಳು ಒಡ್ಡಿದ ಪೈಪೋಟಿಯಲ್ಲಿ ನೀರಜ್ ಪುಟಕಿಟ್ಟ ಚಿನ್ನವಾಗಿ ಹೊರಹೊಮ್ಮಿದರು. ರಭಸವಾಗಿ ಬೀಸುತ್ತಿದ್ದ ಗಾಳಿಯ ಸವಾಲಿನಲ್ಲಿಯೇ 86.18 ಮೀಟರ್ ದೂರ ಜಾವೆಲಿನ್ ಎಸೆದ ಒಲಿಂಪಿಯನ್ ನೀರಜ್ ಪ್ರಥಮ ಸ್ಥಾನಕ್ಕೆ ಲಗ್ಗೆ ಇಟ್ಟರು.

ವಿಶ್ವ ಅಥ್ಲೆಟಿಕ್ಸ್ನಿಂದ ಗೋಲ್ಡ್ ಮಾನ್ಯತೆ ಪಡೆದ ಈ ಕೂಟದಲ್ಲಿ ನೀರಜ್ ಚಿನ್ನದ ಹುಡುಗನಾದರು. ಅವರಿಗೆ ನಿಕಟ ಪೈಪೋಟಿಯೊಡ್ಡಿದ ಕೆನ್ಯಾದ ಜೂಲಿಯಸ್ ಯಿಗೊ ಮತ್ತು ಶ್ರೀಲಂಕಾದ ರುಮೇಶ್ ಪತಿರಾಗೆ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

14 ಸಾವಿರಕ್ಕೂ ಹೆಚ್ಚು ಕ್ರೀಡಾಪ್ರೇಮಿಗಳು ಸೇರಿದ್ದ ಕ್ರೀಡಾಂಗಣದಲ್ಲಿ, 27 ವರ್ಷ ವಯಸ್ಸಿನ ನೀರಜ್ ಮೊದಲ ಥ್ರೋನಲ್ಲಿ ಫೌಲ್ ಮಾಡಿದರು. ಎರಡನೇ ಸುತ್ತಿನ ಥ್ರೋಗಳಲ್ಲಿ ಶ್ರೀಲಂಕಾದ ರುಮೇಶ್ ಅವರು 81.90 ಮೀ. ಥ್ರೋ ಮಾಡಿದರು. ಈ ಕೂಟದಲ್ಲಿ 80 ಮೀ ದಾಟಿದ ಮೊದಲ ಅಥ್ಲೀಟ್ ಆದರು. ಆದರೆ ಅದೇ ಸುತ್ತಿನಲ್ಲಿ ನೀರಜ್ ಭರ್ಚಿಯನ್ನು 82.99 ಮೀ ಎಸೆದರು. ಈ ಪೈಪೋಟಿ ಮೂರನೇ ಸುತ್ತಿಗೂ ವಿಸ್ತರಿಸಿತು. ಆದರೆ ಅದು ನೀರಜ್ ಪಾಲಿಗೆ ನಿರ್ಣಾಯಕವೂ ಆಗಿತ್ತು!

ಮೂರನೇ ಥ್ರೋನಲ್ಲಿ ರುಮೇಶ್ 84.34 ಮೀಟರ್ಸ್ ದೂರ ಎಸೆದು ನೀರಜ್ ಅವರಿಗೆ ಸವಾಲೆಸೆದರು. ಆದರೆ ಎರಡು ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಎದೆಗುಂದಲಿಲ್ಲ. 86.18 ಮೀ. ದೂರ ಭರ್ಜಿಯನ್ನು ಎಸೆದು ತಾವೇ ‘ಕ್ಲಾಸಿಕ್’ ಎಂದು ತೋರಿಸಿಕೊಟ್ಟರು. ತಾವು ಎಸೆದ ಭರ್ಚಿಯು ಗಾಳಿಯನ್ನು ಸೀಳುತ್ತಾ ಹೋಗಿ ನೆಲಸ್ಪರ್ಶ ಮಾಡುವ ಮುನ್ನವೇ ನೀರಜ್ ತಮ್ಮ ಎಂದಿನ ವಿಜಯಶೈಲಿಯನ್ನು ಪ್ರದರ್ಶಿಸಿದರು. ಜನಸ್ತೋಮದ ಸಂಭ್ರಮ ಮುಗಿಲುಮುಟ್ಟಿತು.

12 ಅಥ್ಲೀಟ್ಗಳಿಗೆ ತಲಾ ಮೂರು ಥ್ರೋಗಳು ಆದ ನಂತರ ಅಗ್ರ ಎಂಟು ಮಂದಿಯನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು. ಸ್ಪರ್ಧೆಗೂ ಮುನ್ನ ನೀರಜ್ ಅವರಿಗೆ ನಿಕಟ ಪೈಪೋಟಿಯೊಡ್ಡುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದ ಜರ್ಮನಿಯ ಥಾಮಸ್ ರೋಲೆ ಅವರು ಟಾಪ್ 8 ಹಂತಕ್ಕೆ ಅರ್ಹತೆ ಪಡೆಯಲಿಲ್ಲ. ಈ ಹಂತದಲ್ಲಿ ನೀರಜ್ ಅವರನ್ನು ಯಾರೂ ಹಿಂದಿಕ್ಕಲಿಲ್ಲ.
.ಬೆಂಗಳೂರು | ನೀರಜ್ ಚೋಪ್ರಾ ಕ್ಲಾಸಿಕ್ ಚಾರಿತ್ರಿಕ ಉತ್ಸವಕ್ಕೆ ಕಂಠೀರವ ಸಜ್ಜು.ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆ: 10 ಸಾವಿರ ಜನರ ನಿರೀಕ್ಷೆ.NC Classic | ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯ: ನೀರಜ್ ಚೋಪ್ರಾ.ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಕೂಟ ಬೆಂಗಳೂರಿಗೆ ಸ್ಥಳಾಂತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.