ಕೊಪ್ಪಳ: ದಕ್ಷಿಣ ಕನ್ನಡದ ಬಾಲಕ ಮತ್ತು ಬಾಲಕಿಯರ ತಂಡಗಳು ಇಲ್ಲಿಗೆ ಸಮೀಪದ ಕಿಡದಾಳದ ಶಾರದಾ ಪಿಯು ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಬಾಲಕರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡವು, 25–19ರಲ್ಲಿ ಮಂಡ್ಯ ತಂಡವನ್ನು ಮಣಿಸಿತು. ಸೆಮಿಫೈನಲ್ ಹಣಾಹಣಿಯಲ್ಲಿ ಚಾಂಪಿಯನ್ ತಂಡ 27–15ರಲ್ಲಿ ಬೆಂಗಳೂರು ಉತ್ತರ ತಂಡದ ಮೇಲೆ, ಮಂಡ್ಯ 23–20ರಲ್ಲಿ ಹಾಸನ ಜಿಲ್ಲಾ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತು ತಲುಪಿದ್ದವು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ದಕ್ಷಿಣ ಕನ್ನಡ 27–10ರಲ್ಲಿ ಹಾಸನ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಸೆಮಿಫೈನಲ್ ಪಂದ್ಯಗಳಲ್ಲಿ ದಕ್ಷಿಣ ಕನ್ನಡ 19–16ರಲ್ಲಿ ಬೆಂಗಳೂರು ಉತ್ತರ ತಂಡದ ಮೇಲೂ, ಹಾಸನ ತಂಡ 16–3ರಲ್ಲಿ ಕೊಪ್ಪಳ ತಂಡದ ವಿರುದ್ಧ ಗೆಲುವು ಸಾಧಿಸಿದ್ದವು.
ಬಾಲಕರ ವಿಭಾಗದ ಪ್ರಶಸ್ತಿ ಗೆದ್ದ ದಕ್ಷಿಣ ಕನ್ನಡ ತಂಡ. ಕುಳಿತವರು; ಎಡದಿಂದ: ರೋಹನ್ ಕುಟಿನೊ ಶೆಲ್ಡನ್ ಡಿಸೋಜಾ ರೋಹನ್ ಯಶವಂತ ಪವನ್ ಪೂಜಾರಿ ನಿಂತವರು; ಸೌರವ್ ವಿಶಾಂತ್ ಪೃಥ್ವಿಕ್ ಸತ್ಯಜಿತ್ ಚಂದ್ರಶೇಖರ (ತರಬೇತುದಾರ) ವಿನ್ಯಾಸ್ ಅಖಿಲೇಶ್ ಹಾಗೂ ಮಹಮ್ಮದ್ ಮಸೂದ್ –ಪ್ರಜಾವಾಣಿ ಚಿತ್ರ
–ಪ್ರಜಾವಾಣಿ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.