ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ನಿಶಾಂತ್‌ಗೆ ಸೋಲು, ಸಿಗದ ಒಲಿಂಪಿಕ್ಸ್‌ ಟಿಕೆಟ್

Published 12 ಮಾರ್ಚ್ 2024, 16:10 IST
Last Updated 12 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ಬುಸ್ಟೊ ಆರ್ಸಿಝಿಯೊ (ಇಟಲಿ): ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ನಿಶಾಂತ ದೇವ್ ಅವರು ಪ್ರಥಮ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಅರ್ಹತಾ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ 71 ಕೆ.ಜಿ ವಿಭಾಗದಲ್ಲಿ ಸೋತು,  ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿದ್ದಾರೆ. ಇದರೊಂದಿಗೆ ಭಾರತದ ಎಲ್ಲಾ ಬಾಕ್ಸರ್‌ಗಳು ಅರ್ಹತಾ ಟೂರ್ನಿಯಿಂದ ಬರಿಗೈಯಲ್ಲಿ ಮರಳಿದ್ದಾರೆ. 

ಸೋಮವಾರ ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ನಿಶಾಂತ ದೇವ್ 2021ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಅಮೆರಿಕದ ಒಮರಿ ಜೋನ್ಸ್ ವಿರುದ್ಧ 1-4 ಅಂತರದಿಂದ ಸೋತರು.

ಕೊನೆಯ ಎಂಟು ಹಂತಗಳಲ್ಲಿ ಗೆದ್ದರೆ 2023ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತರಿಗೆ ಒಲಿಂಪಿಕ್ ಕೋಟಾ ಸಿಗಲಿದೆ.

ಇಲ್ಲಿ ಸ್ಪರ್ಧಿಸುತ್ತಿರುವ ಒಂಬತ್ತು ಬಾಕ್ಸರ್‌ಗಳ ಪೈಕಿ ಯಾರೊಬ್ಬರೂ ಒಲಿಂಪಿಕ್ಸ್‌ಗೆ ಭಾರತ ನಾಲ್ಕು ಕೋಟಾಗಳ ಪಟ್ಟಿಗೆ ಸೇರಲು ಸಾಧ್ಯವಾಗಲಿಲ್ಲ.  

ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಝರೀನ್  (50 ಕೆಜಿ), ಪ್ರೀತಿ ಪವಾರ್ (54 ಕೆಜಿ), ಪರ್ವೀನ್ ಹೂಡಾ (57 ಕೆಜಿ) ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರು ಮಹಿಳಾ ವಿಭಾಗದಲ್ಲಿ ಒಲಿಂಪಿಕ್ಸ್‌ ಕೋಟಾ ಗಿಟ್ಟಿಸಿದ್ದಾರೆ.  

ಮೇ 23 ರಿಂದ ಜೂನ್ 3 ರವರೆಗೆ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಎರಡನೇ ವಿಶ್ವ ಒಲಿಂಪಿಕ್ ಬಾಕ್ಸಿಂಗ್ ಕ್ವಾಲಿಫೈಯರ್‌ನಲ್ಲಿ ಭಾರತದ ಬಾಕ್ಸರ್‌ಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್ ಕಾಯ್ದಿರಿಸಲು ಅಂತಿಮ ಅವಕಾಶ ಪಡೆಯಲಿದ್ದಾರೆ. ಬ್ಯಾಂಕಾಕ್ ಕೂಟದಿಂದ 45 ರಿಂದ 51 ಬಾಕ್ಸರ್ ಗಳು ಅರ್ಹತೆ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT