ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Norway Chess: ಅಲಿರೇಜಾ ವಿರುದ್ಧ ಪ್ರಜ್ಞಾನಂದಗೆ ಜಯ 

Published 28 ಮೇ 2024, 17:37 IST
Last Updated 28 ಮೇ 2024, 17:37 IST
ಅಕ್ಷರ ಗಾತ್ರ

ಸ್ಟಾವಂಗರ್ (ನಾರ್ವೆ): ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ನಾರ್ವೆ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಫ್ರಾನ್ಸ್ ನ ಫಿರೋಜ್ಜಾ ಅಲಿರೇಜಾ ಅವರನ್ನು ಸೋಲಿಸಿದರು.

ಮೊದಲ ಸುತ್ತಿನ ಅಂತ್ಯದ ನಂತರ ಪ್ರಜ್ಞಾನಂದ, ಮ್ಯಾಗ್ನಸ್‌ ಕಾರ್ಲಸನ್ ಮತ್ತು ಹಿಕಾರು ನಕಾಮುರಾ ತಲಾ 1.5 ಅಂಕಗಳೊಂದಿಗೆ ಮುನ್ನಡೆಯನ್ನು ಹಂಚಿಕೊಂಡರೆ, ಅಲಿರೇಜಾ, ದಿಂಗ್ ಲಿರೆನ್ ಮತ್ತು ಫ್ಯಾಬಿಯಾನೊ ಕರುವಾನಾ ಅರ್ಧ ಪಾಯಿಂಟ್ ಹಿಂದೆ ಇದ್ದಾರೆ. ಪ್ರಜ್ಞಾನಂದ ಅವರು ಅಲಿರೇಜಾ ವಿರುದ್ಧ ತನ್ನ ಮೊದಲ ಜಯ ದಾಖಲಿಸಿದರು. ‌

ಮಹಿಳಾ ವಿಭಾಗದಲ್ಲಿ ಪಿಯಾ ಕ್ರಾಮ್ಲಿಂಗ್ ಅವರನ್ನು ಮಣಿಸಿ, ಕೊನೇರು ಹಂಪಿ 1.5 ಅಂಕಗಳನ್ನು ಪಡೆದರು. ಆರ್. ವೈಶಾಲಿ ಅವರು ಮಹಿಳಾ ವಿಶ್ವ ಚಾಂಪಿಯನ್ ಚೀನಾದ ವೆಂಜುನ್ ಜು ವಿರುದ್ಧ ಸ್ಫೂರ್ತಿದಾಯಕ ಪ್ರದರ್ಶನ ನೀಡಿದರು. ಆದರೆ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವೆಂಜುನ್ 43 ನಡೆಗಳಲ್ಲಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT